ವಿರಾಟ್​​ ಕೊಹ್ಲಿ  ಫಾರ್ಮ್'​ಗೆ ಮರಳಿದ್ದು ಹಲವು ರೀತಿಯಿಂದ ಭಾರತಕ್ಕೆ ವರವಾಗಿದೆ. ಇಂದೋರ್'​ನಲ್ಲಿ ದ್ವಿಶತಕ ಸಿಡಿಸುವುದರೊಂದಿಗೆ ವಿರಾಟ್​ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಬ್ಬ ಯಶಸ್ವಿ ಪ್ಲೇಯರ್​ ಮತ್ತು ಯಶಸ್ವಿ ನಾಯಕನ್ನಾಗಿ ಕೊಹ್ಲಿ ಮಿನುಗುತ್ತಿದ್ದಾರೆ. ವಿರಾಟ್​-ರಹಾನೆ ಜೋಡಿ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದೆ.

ವಿರಾಟ್​​ ಕೊಹ್ಲಿ ಫಾರ್ಮ್'​ಗೆ ಮರಳಿದ್ದು ಹಲವು ರೀತಿಯಿಂದ ಭಾರತಕ್ಕೆ ವರವಾಗಿದೆ. ಇಂದೋರ್'​ನಲ್ಲಿ ದ್ವಿಶತಕ ಸಿಡಿಸುವುದರೊಂದಿಗೆ ವಿರಾಟ್​ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಬ್ಬ ಯಶಸ್ವಿ ಪ್ಲೇಯರ್​ ಮತ್ತು ಯಶಸ್ವಿ ನಾಯಕನ್ನಾಗಿ ಕೊಹ್ಲಿ ಮಿನುಗುತ್ತಿದ್ದಾರೆ. ವಿರಾಟ್​-ರಹಾನೆ ಜೋಡಿ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದೆ.

ಟೆಸ್ಟ್​'ನಲ್ಲಿ ವಿರಾಟ್​ ಗರಿಷ್ಠ ಸ್ಕೋರ್​

ವಿರಾಟ್​ ಕೊಹ್ಲಿ ಇದುವರೆಗೂ ತವರಿನಲ್ಲಿ ಹೇಳಿಕೊಳ್ಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಅವರು ಶತಕ ದಾಖಲಿಸಿದ್ರು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದರು. ಆದರೆ ಈ ಸಲ ಅಂತು ಇಂತೂ ಕಾದು ಒಂದು ಉತ್ತಮ ಇನ್ನಿಂಗ್ಸ್​ ಆಡುವ ಮೂಲಕ ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. 211 ರನ್​ಗಳಿಸುವ ಮೂಲಕ ತಮ್ಮ ಜೀವನದ ಗರಿಷ್ಠ ಸ್ಕೋರ್ ದಾಖಲಿಸಿದರು.

ಎರಡನೇ ದಿನದ ಆರಂಭದಿಂದಲೂ ವಿರಾಟ್​ ಸಕರಾತ್ಮಕವಾಗಿ ಆಟವಾಡಿದರು. ಕಿವೀಸ್​'ನ ಎಲ್ಲ ಬೌಲರ್​ಗಳಿಗೂ ಸರಾಗವಾಗಿ ಆಡಿದ ವಿರಾಟ್​, ಎಲ್ಲರ ವಿರುದ್ಧ ಬೌಂಡರಿ ಸಿಡಿಸುವ ಮೂಲಕ ಇನ್ನಿಂಗ್ಸ್​​ ಕಟ್ಟುತ್ತ ಸಾಗಿದ್ದರು.

ಇದುವರೆಗೂ ಭಾರತ ಯಾವ ಟೆಸ್ಟ್ ನಾಯಕರು ಎರಡು ಸಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿರಲಿಲ್ಲ. ಇಂಧೋರ್​ನಲ್ಲಿ ವಿರಾಟ್​ ಆಕರ್ಷಕ ದ್ವಿಶತಕ ದಾಖಲಿಸಿದರು. ನಾಯಕನ್ನಾಗಿ ವಿರಾಟ್​​ ದಾಖಲಿಸಿದ ಎರಡನೇ ದ್ವಿಶತಕ ಇದಾಗಿತ್ತು. ಅದ್ಭುತ ಆಟದ ಮೂಲಕ ವಿರಾಟ್​ ಎಲ್ಲರ ಗಮನಸೆಳೆದರು.

ನಾಯಕನ್ನಾಗಿ ವಿರಾಟ್​​ ಅಬ್ಬರ

ನಾಯಕನ್ನಾಗಿರುವ ವಿರಾಟ್​ ಕೊಹ್ಲಿ ತವರಿನಲ್ಲಿ ಒಟ್ಟು ನಾಲ್ಕು ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರನ್ನಾಗಿರುವ ವಿರಾಟ್​ ನಾಯಕನ್ನಾಗಿ 6 ಶತಕ ಸಿಡಿಸಿದ್ದಾರೆ. ನಾಯಕನ್ನಾಗಿ ಇಷ್ಟು ಕಡಿಮೆ ಅವಧಿಯಲ್ಲಿ 6 ಶತಕ ಸಿಡಿಸಿದ ಹಿರಿಮೆ ಕೂಡ ಅವರಿಗೆ ಸಲ್ಲುತ್ತದೆ. ಇನ್ನೂ ನಾಯಕನ್ನಾಗಿಯು ವಿರಾಟ್​ ಸತತ ಗೆಲುವಿನ ಲಯದಲ್ಲಿದ್ದು, ದಿನದಿಂದ ದಿನಕ್ಕೆ ತಮ್ಮ ದಾಖಲೆ ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ..

ಗಮನಸೆಳೆದ ವಿರಾಟ್​ ಆಟ

ನ್ಯೂಜಿಲೆಂಡ್'​ನ ಎಲ್ಲ ಬೌಲರ್​'ಗಳಿಗೂ ದಿಟ್ಟ ಉತ್ತರ ನೀಡಿದ ವಿರಾಟ್​ ಆಟ ಹೆಚ್ಚು ಗಮನಸೆಳೆಯಿತು. ತಮ್ಮ ಟ್ರೇಡ್​ಮಾರ್ಕ್​ ಶಾಟ್​ಗಳಿಂದದ ಗಮನಸೆಳೆದ ಕೊಹ್ಲಿ ತಮ್ಮ ಜೀವನದ ಸರ್ವಶ್ರೇಷ್ಠ 211ರನ್​ಗಳಿಸಿ ಹೊರನಡೆದರು. ನಾಲ್ಕನೇ ವಿಕೆಟ್​'ಗೆ ಈ ಜೋಡಿ 365ರನ್​ಗಳ ಜೊತೆಯಾಟವಾಡುವ ಮೂಲಕ ಗಮನಸೆಳೆಯಿತು..

ವಿರಾಟ್​ ದ್ವಿಶತಕ ಇಂತಿದೆ. ಒಟ್ಟು 366 ಬಾಲ್ ಆಡಿರುವ ವಿರಾಟ್​ 20 ಬೌಂಡರಿಗಳ ಸಹಾಯದಿಂದ, 57.65ರ ಸ್ಟ್ರೈಕ್​ರೇಟ್​ನಲ್ಲಿ 211ರನ್​ಗಳಿಸಿದ್ದಾರೆ.

ಸೂಕ್ತ ಸಮಯಕ್ಕೆ ಫಾರ್ಮ್​ ಕಂಡುಕೊಂಡ ವಿರಾಟ್​ ಎರಡನೇ ದಿನವೂ ಆಕರ್ಷಕ 108ರನ್​ಗಳನ್ನು ಸೇರಿಸುವ ಮೂಲಕ 211ರನ್​ಗಳಿಸಿ ಮಿಂಚಿದ್ರು. ನಾಯಕನ್ನಾಗಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ವಿರಾಟ್​, ತವರಿನಲ್ಲಿ ನಡೆಯುವ ಸಮರೋಪಾದಿ ಟೆಸ್ಟ್​ ಸರಣಿಯಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ..