ಕೊಲ್ಕತ್ತಾ(ಅ.07): ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಹಾಗೂ ತವರಿನಲ್ಲಿ ನಡೆದ 250ನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾತಮಾಡಿದ್ದು, ನಾಯಕತ್ವದಿಂದ ತುಂಬಾ ಪಕ್ವವಾಗಿದ್ದೇನೆ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಲ್ಲದೇ ಇದೇ ಮೊದಲ ಬಾರಿಗೆ ಎಂ.ಎಸ್. ಧೋನಿ ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದು, ಧೋನಿ ನೋಡಿ ಬಹಳಷ್ಟು ಕಲಿತಿದ್ದೇನೆ. ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಕೆಲಸ, ಅದಕ್ಕೆ ಧೈರ್ಯ ಬೇಕು. ಇದನ್ನೆಲ್ಲ ಧೋನಿಯನ್ನು ನೋಡಿ ಕಲಿತಿದ್ದೇನೆ ಎನ್ನುತ್ತಿದ್ದಾರೆ. 

ತಪ್ಪಾಗಿರಲಿ ಸರಿಯಾಗಿರಲಿ ನಿರ್ಧಾರ ತೆಗೆದುಕೊಂಡ ಮೇಲೆ ಹಿಂಜರಿಯದೆ ಅದನ್ನು ಬೆಂಬಲಿಸುವುದೇ ಒಳ್ಳೆ ನಾಯಕನ ಲಕ್ಷಣ ಎಂದಿರುವ ವಿರಾಟ್​, ನಾಯಕತ್ವದಿಂದ ತುಂಬಾ ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ.