ನಿನ್ನೆ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನ ಬರೆದಿದ್ದಾರೆ.

ಮೊಹಾಲಿ(ಅ.24): ನಿನ್ನೆ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1. 26 ಶತಕ:ಸದ್ಯ 166 ಏಕದಿನ ಇನ್ನಿಂಗ್ಸ್ ಆಡಿರುವ ಕೊಹ್ಲಿ 26 ಶತಕಗಳನ್ನ ಸಿಡಿಸಿದ್ದಾರೆ. ಸಚಿನೆ ತೆಂಡೂಲ್ಕರ್ 26 ಶತಕ ಸಿಡಿಸಲು 247 ಪಂದ್ಯ ಆಡಿದ್ದರು. ರಿಕಿ ಪಾಂಟಿಂಗ್ 286 ಪಂದ್ಯ ಮತ್ತು ಸನತ್ ಜಯಸೂರ್ಯ 408 ಪಂದ್ಯಗಳನ್ನ ತೆಗೆದುಕೊಂಡಿದ್ದರು.

2) ಮೊಹಾಲಿಯಲ್ಲಿ ಅತಿಹೆಚ್ಚು ಸ್ಕೋರ್: ಇನ್ನೂ ವಿರಾಟ್ ಕೊಹ್ಲಿ ಮೊಹಾಲಿ ಮೈದಾನದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಮಾಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಧೋನಿ ಗಳಿಸಿದ್ದ 139 ರನ್ ಇದುವರೆಗಿನ ದಾಖಲೆಯಾಗಿತ್ತು. ನಿನ್ನೆ 154 ರನ್ ಗಳಿಸಿದ ಕೊಹ್ಲಿ ಆ ದಾಖಲೆ ಮುರಿದಿದ್ದಾರೆ.