ತಿರುವನಂತಪುರಂ(ನ.03): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್ ಧೋನಿ ವಿಶೇಷ ಅಭಿಮಾನಿಯನ್ನ ಭೇಟಿಯಾಗಿ ಎಲ್ಲರ ಮೆಚ್ಚುಗೆಗೆ  ಪಾತ್ರರಾಗಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗರ ಜೊತೆ ಮಾತುಕತೆ ನಡೆಸಿದ ಕೇರಳದ ಈ ಪುಟ್ಟ ಅಭಿಮಾನಿಯ ಸಂತಸಕ್ಕೆ ಪಾರವೆ ಇಲ್ಲ. 

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿಯನ್ನ ಭೇಟಿಯಾಗಲು ಈ ವಿಶೇಷ ಅಭಿಮಾನಿ ಕಾಯುತ್ತಿದ್ದ. ಇದನ್ನ ಅರಿತ ಕೊಹ್ಲಿ ಹಾಗೂ ಧೋನಿ ಈ ಅಭಿಮಾನಿ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು. ಇಷ್ಟೇ ಅಲ್ಲ ಆಟೋಗ್ರಾಫ್ ನೀಡಿದರು.

ಕೊಹ್ಲಿ ಹಾಗೂ ಧೋನಿ ಕೈಕುಲಕಿದ ಈ ವಿಶೇಷ ಅಭಿಮಾನಿ ಖುಷಿ ಇಮ್ಮಡಿಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಾರ್ ಕ್ರಿಕೆಟಿಗರ ಸರಳತೆಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.