. ಆದರೆ ಕೊಹ್ಲಿಗೆ ಮಿಥಾಲಿ ರಾಜ್ ಯಾರೆಂಬುದು ಗೊತ್ತಿಲ್ಲವಾ? ಬಹುಶಃ ಆಕೆಯನ್ನು ನೋಡಿಲ್ಲವೋ ಅಥವಾ ಹೆಚ್ಚು ತಿಳಿದುಕೊಂಡಿಲ್ಲವೇನೋ. ಇದಕ್ಕೆ ಕಾರಣವಿಷ್ಟೆ

ನವದೆಹಲಿ(ಜು.13): ವಿರಾಟ್ ಕೊಹ್ಲಿ ಹೇಗೆ ಯುವಕರ ಭಾರತ ತಂಡದಲ್ಲಿ ನಾಯಕರಾಗಿ ಸರ್ವಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆಯೋ ಹಾಗೆಯೇ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್'ನಲ್ಲಿ ನಾಯಕಿಯಾಗಿ ಉನ್ನತ ಸಾಧನೆ ಮಾಡಿದ್ದಾರೆ. ಆದರೆ ಕೊಹ್ಲಿಗೆ ಮಿಥಾಲಿ ರಾಜ್ ಯಾರೆಂಬುದು ಗೊತ್ತಿಲ್ಲವಾ? ಬಹುಶಃ ಆಕೆಯನ್ನು ನೋಡಿಲ್ಲವೋ ಅಥವಾ ಹೆಚ್ಚು ತಿಳಿದುಕೊಂಡಿಲ್ಲವೇನೋ. ಇದಕ್ಕೆ ಕಾರಣವಿಷ್ಟೆ

ನಿನ್ನೆಯಷ್ಟೆ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿರಾಜ್ ಇಂಗ್ಲೆಂಡ್'ನ ಷಾರ್ಲೆಟ್ ಎಡ್ವರ್ಡ್ಸ್ ಅವರ 5992 ರನ್'ಗಳ ದಾಖಲೆಯನ್ನು ಅಳಿಸಿ 6000 ರನ್ ಗಳಿಸಿದ ವಿಶ್ವದ ಮೊಟ್ಟ ಮೊದಲ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರನ್ನು ಅಂತರರಾಷ್ಟ್ರೀಯ ದಿಗ್ಗಜರೆಲ್ಲ ಅಭಿನಂದಿಸಿದರು ಅವರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಮಿಥಾಲಿ ಬಗ್ಗೆ ಹೆಚ್ಚು ತಿಳಿಯದ ಕಾರಣವೋ ಏನೊ ಅವರ ಫೋಟೊ ಬದಲಿಗೆ ಆರಂಭಿಕ ಆಟಗಾರ್ತಿ ಪೂನಮ್ ರಾವುತ್ ಭಾವಚಿತ್ರವನ್ನು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.