ನವದೆಹಲಿ (ಸೆ.12): ವಿರಾಟ್ ಕೋಹ್ಲಿ ಶ್ರೀಮಂತ ಕ್ರಿಕೆಟಿಗ ಎನ್ನುವುದು ಕ್ರಿಕೆಟ್ ಪ್ರೇಮಿಗಳೆಲ್ಲರಿಗೂ ಗೊತ್ತಿರುವ ಸಂಗತಿ. ಜೊತೆಗೆ ಸದಾ ಸುದ್ದಿಯಲ್ಲಿರುವ ಆಟಗಾರ.
ಈಗ ಇವರ ಬಗ್ಗೆ ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ವಿರಾಟ್ ಕೋಹ್ಲಿ ಶ್ರೀಮಂತ ಕ್ರಿಕೆಟಿಗ ಹೌದು. ಆದರೆ ಸದ್ಯ ಟೀಂ ಇಂಡಿಯಾ ತಂಡದಲ್ಲಿರುವ ಎಲ್ಲರಿಗಿಂತ ಹೆಚ್ಚು ಕಂಜೂಸ್ ವಿರಾಟ್ ಕೊಹ್ಲಿ ಅಂತೆ. ಹೀಗಂತ ಯುವಿ ಕಿಲಾಡಿಯಾಗಿ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ದೊಡ್ಡ ಕಂಜೂಸ್. ನಾವು ಹೊರಗಡೆ ಹೋದಾಗ ಪ್ರತಿಸಲ ನಾನೇ ದುಡ್ಡು ಕೊಡುತ್ತೇನೆ. ವಿರಾಟ್ ಗೆ ಹಣ ಕೊಡು ಅಂತ ಒತ್ತಾಯಿಸುತ್ತೇನೆ. ಆದರೂ ಅವನು ಕೊಡಲ್ಲ. ಅದೇ ರೀತಿ ಆಶೀಶ್ ನೆಹ್ರಾ ಕೂಡಾ ಕಂಜೂಸ್. ಹೆಂಡತಿ, ಮಕ್ಕಳು ಬರುವ ತನಕ ನಾನು ಖರ್ಚು ಮಾಡಲ್ಲ ಅಂತ ಹೇಳ್ತಾ ಇದ್ದ” ಎಂದು ಯುವಿ ತಮಾಷೆ ಮಾಡಿದ್ದಾರೆ.
