ಕೊಹ್ಲಿ ಗುಣಗಾನ ಮಾಡಿದ ಧೋನಿ ಹೇಳಿದ್ದೇನು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 10:43 AM IST
Virat Kohli Is The Best And Close To Legend Status Says MS Dhoni
Highlights

ಕೊಹ್ಲಿ ಕ್ರಿಕೆಟ್ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹದಲ್ಲಿದ್ದಾರೆ ಎಂದು ಧೋನಿ ಹೇಳಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ವಿರಾಟ್ ಬಗ್ಗೆ ಮಂಗಳವಾರ ಇಲ್ಲಿ ಮಾತನಾಡಿದ ಧೋನಿ, ‘ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್‌ನ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹಕ್ಕೆ ಅವರು ತಲುಪಿದ್ದಾರೆ. ಅವರ ಯಶಸ್ಸು ಕಂಡು ಖುಷಿಯಾಗುತ್ತದೆ. ಎಲ್ಲೆಡೆ ಅವರು ಬ್ಯಾಟ್ ಮಾಡಿರುವ ರೀತಿ ಅಮೋಘ’ ಎಂದರು.

ನವದೆಹಲಿ[ಆ.08]: ಪ್ರತಿಭಾನ್ವಿತ ಯುವ ಆಟಗಾರನಾಗಿ ಹಲವು ವರ್ಷಗಳ ಕಾಲ ಮಿಂಚಿದ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್ ಜಗತ್ತನ್ನು ಆಳಲು ಶುರು ಮಾಡಿದ್ದಾರೆ. ಕೇವಲ ಆಟಗಾರನಾಗಷ್ಟೇ ಅಲ್ಲದೇ ಪ್ರಭಾವಿ ನಾಯಕನಾಗಿಯೂ ವಿರಾಟ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಭಾರತ ತಂಡದ ನಾಯಕನಿಗೆ ಮಾಜಿ ನಾಯಕ ಎಂ.ಎಸ್.ಧೋನಿಯಿಂದ ಭಾರೀ ಪ್ರಶಂಸೆ ದೊರೆತಿದೆ. 

ಕೊಹ್ಲಿ ಕ್ರಿಕೆಟ್ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹದಲ್ಲಿದ್ದಾರೆ ಎಂದು ಧೋನಿ ಹೇಳಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ವಿರಾಟ್ ಬಗ್ಗೆ ಮಂಗಳವಾರ ಇಲ್ಲಿ ಮಾತನಾಡಿದ ಧೋನಿ, ‘ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್‌ನ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹಕ್ಕೆ ಅವರು ತಲುಪಿದ್ದಾರೆ. ಅವರ ಯಶಸ್ಸು ಕಂಡು ಖುಷಿಯಾಗುತ್ತದೆ. ಎಲ್ಲೆಡೆ ಅವರು ಬ್ಯಾಟ್ ಮಾಡಿರುವ ರೀತಿ ಅಮೋಘ’ ಎಂದರು.

ಧೋನಿ ನಾಯಕತ್ವದಲ್ಲಿ ಬೆಳೆದ ವಿರಾಟ್ ನಾಯಕತ್ವದ ಬಗ್ಗೆಯೂ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ತೋರಿದ ಜವಾಬ್ದಾರಿಯನ್ನು ಮಹಿ ಕೊಂಡಾಡಿದ್ದಾರೆ. ‘ತಂಡವನ್ನು ಸದಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಬೇಕು ಎನ್ನುವುದು ಕೊಹ್ಲಿಯ ಗುರಿ. ನಾಯಕನಾದವನಿಗೆ ಈ ಗುಣ ಬಹಳ ಮುಖ್ಯ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಧೋನಿ ಹೇಳಿದರು.

loader