ಎಬಿಡಿ, 19ನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಆಫ್‌ಸ್ಟಂಪ್‌ನಿಂದ ಆಚೆ ಎಸೆದ ಚೆಂಡನ್ನು, ಲೈನ್‌ನಿಂದ ಆಚೆ ನೆಗೆದು ಮಿಡ್ ವಿಕೆಟ್‌ನತ್ತ ಸಿಕ್ಸರ್ ಬಾರಿಸಿದ್ದು ಎಲ್ಲರ ಮನ ಸೆಳೆಯಿತು.
ನವದೆಹಲಿ(ಮೇ.14): ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಶನಿವಾರ ಎಬಿ ಡಿವಿಲಿಯರ್ಸ್ ಬಾರಿಸಿದ ಸಿಕ್ಸರ್ ತಂಡದ ನಾಯಕ, ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಯನ್ನು ಬೆರಗಾಗಿಸಿತು. ಎಬಿಡಿ, 19ನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಆಫ್‌ಸ್ಟಂಪ್‌ನಿಂದ ಆಚೆ ಎಸೆದ ಚೆಂಡನ್ನು, ಲೈನ್‌ನಿಂದ ಆಚೆ ನೆಗೆದು ಮಿಡ್ ವಿಕೆಟ್‌ನತ್ತ ಸಿಕ್ಸರ್ ಬಾರಿಸಿದ್ದು ಎಲ್ಲರ ಮನ ಸೆಳೆಯಿತು. ಡಗೌಟ್‌ನಲ್ದಿದ್ದ ಕೊಹ್ಲಿ ಬಾಯಿ ಮೇಲೆ ಕೈಯಿಟ್ಟು , ಸಿಕ್ಸರ್‌ಗೆ ಪ್ರತಿಕ್ರಿಯಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ
ತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಗೂಗಲ್ ಸಿಇಒ ಸುಂದರ್ ಪಿಚ್ಚೖ ಕೂಡ ಎಬಿಡಿ ಹಾಗೂ ವಿರಾಟ್ ಆಟವನ್ನು ಕೊಂಡಾಡಿ ಕೊಹ್ಲಿ ಟ್ವೀಟ್'ಗೆ ರಿಟ್ವೀಟ್ ಮಾಡಿದ್ದಾರೆ.
