ಟ್ವೀಟರ್‌ನಲ್ಲಿ ಕೊಹ್ಲಿಯಿಂದ ಸಲಹೆ ಪಡೆದುಕೊಳ್ಳುತ್ತಿರುವ ಫೋಟೋವನ್ನು ಹಾಕಿರುವ ಪೃಥ್ವಿ , ‘ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ನೊಂದಿಗೆ ಸಮಾಲೋಚನೆ ನಡೆಸುವ ಅವಕಾಶ ದೊರೆಯಿತು. ಧನ್ಯವಾದ ವಿರಾಟ್ ಸರ್’ ಎಂದು ಬರೆದಿದ್ದಾರೆ. 

ನವದೆಹಲಿ(ಮೇ.14): ಭಾರತ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ, ಭಾರತ ಹಿರಿಯರ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಬ್ಯಾಟಿಂಗ್ ಸಲಹೆ ಗಳನ್ನು ಪಡೆದುಕೊಂಡಿದ್ದಾರೆ. 
ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಪರಸ್ಪರ ಭೇಟಿಯಾದ ಪೃಥ್ವಿ ಹಾಗೂ ವಿರಾಟ್ ಬಹಳಷ್ಟು ಕಾಲ ಚರ್ಚೆ ನಡೆಸಿದರು. ಟ್ವೀಟರ್‌ನಲ್ಲಿ ಕೊಹ್ಲಿಯಿಂದ ಸಲಹೆ ಪಡೆದುಕೊಳ್ಳುತ್ತಿರುವ ಫೋಟೋವನ್ನು ಹಾಕಿರುವ ಪೃಥ್ವಿ , ‘ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ನೊಂದಿಗೆ ಸಮಾಲೋಚನೆ ನಡೆಸುವ ಅವಕಾಶ ದೊರೆಯಿತು. ಧನ್ಯವಾದ ವಿರಾಟ್ ಸರ್’ ಎಂದು ಬರೆದಿದ್ದಾರೆ. ಕೊಹ್ಲಿ ಮುಂದೆ ಕೈಕಟ್ಟಿ ನಿಂತಿರುವ ಪೃಥ್ವಿ ಸಭ್ಯತೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Scroll to load tweet…