ಏಕದಿನ ಕ್ರಿಕೆಟ್‌ನಲ್ಲಿ ಕೇವಲ 194 ಇನ್ನಿಂಗ್ಸ್'ಗಳಲ್ಲಿ ಅತಿವೇಗವಾಗಿ 9000 ರನ್ ಪೂರೈಸಿದ್ದಾರೆ. ಇದರಿಂದ 205 ಇನ್ನಿಂಗ್ಸ್'ಗಳಲ್ಲಿ 9000 ರನ್ ಗಳಿಸಿ ಎಬಿ ಡಿವಿಲಿಯರ್ಸ್‌ ಬರೆದಿದ್ದ ದಾಖಲೆಯನ್ನು ಅಳಿಸಿಹಾಕಿದರು.
ಕಾನ್ಪುರ(ಅ.29): ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಇಂದು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಸಿದರು.
ಏಕದಿನ ಕ್ರಿಕೆಟ್ನಲ್ಲಿ ಕೇವಲ 194 ಇನ್ನಿಂಗ್ಸ್'ಗಳಲ್ಲಿ ಅತಿವೇಗವಾಗಿ 9000 ರನ್ ಪೂರೈಸಿದ್ದಾರೆ. ಇದರಿಂದ 205 ಇನ್ನಿಂಗ್ಸ್'ಗಳಲ್ಲಿ 9000 ರನ್ ಗಳಿಸಿ ಎಬಿ ಡಿವಿಲಿಯರ್ಸ್ ಬರೆದಿದ್ದ ದಾಖಲೆಯನ್ನು ಅಳಿಸಿಹಾಕಿದರು.
9 ಸಾವಿರ ರನ್ ಪೂರೈಸಿದ 6ನೇ ಭಾರತೀಯ ಕೊಹ್ಲಿಯಾಗಿದ್ದು, ಈ ಮೊದಲು ಸಚಿನ್, ದ್ರಾವಿಡ್, ಗಂಗೂಲಿ, ಅಜರುದ್ದೀನ್ ಹಾಗೂ ಧೋನಿ ಈ ಸಾಧನೆ ಮಾಡಿದ್ದರು. ವಿಶ್ವದಲ್ಲಿ 19ನೇ ಆಟಗಾರ ಎನ್ನುವ ಕೀರ್ತಿಯೂ ಕೊಹ್ಲಿಯದಾಗಿದೆ. ಈ ವರ್ಷ(2017) 2 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಖ್ಯಾತಿಯು ಕೊಹ್ಲಿ ಅವರದಾಗಿದೆ. ಈ ಮೊದಲು ಹಷೀಮ್ ಆಮ್ಲ 1988 ಹಾಗೂ ಜೋ ರೂಟ್ 1855 ಒಂದು ವರ್ಷದಲ್ಲಿ ಹೆಚ್ಚು ರನ್ ಪೂರೈಸಿದ್ದರು.
