ಪರ್ತ್[ಡಿ.17]: 3ನೇ ದಿನದಾಟದಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ 123 ರನ್‌ಗಳಿಸಿದ್ದ ಕೊಹ್ಲಿ ನೀಡಿದ ಕ್ಯಾಚ್‌ನ್ನು ಪೀಟರ್ ಹ್ಯಾಂಡ್ಸ್‌ಕಂಬ್ ಹಿಡಿದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತು. 

ಕಮಿನ್ಸ್ ಎಸೆದ 93ನೇ ಓವರ್‌ನ ಕೊನೆಯ ಎಸೆತದಲ್ಲಿ ಕೊಹ್ಲಿ ಬ್ಯಾಟ್ ಸವರಿದ ಚೆಂಡು ನೇರವಾಗಿ 2ನೇ ಸ್ಲಿಪ್‌ನಲ್ಲಿದ್ದ ಹ್ಯಾಂಡ್ಸ್’ಕಂಬ್ ಕೈ ಸೇರುವ ಬದಲು ಮೈದಾನದಲ್ಲಿ ಪುಟಿದು ಸೇರಿತು. ಇದು ರೀವ್ಯೆವ್‌ನಲ್ಲಿ ಸ್ಪಷ್ಟವಾಗಿತ್ತು. ಆದರೂ ಕೊಹ್ಲಿ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಹೀಗಿತ್ತು ನೋಡಿ ಆ ಕ್ಯಾಚ್:

ನಂತರ ವಿಶ್ಲೇಷಕರ ನಡುವೆ ನಡೆದ ಚರ್ಚೆಯ ವೇಳೆ ಇದೊಂದು ನಾಟೌಟ್ ಎಂದು ಮೇಲ್ನೋಟಕ್ಕೆ ತಿಳಿದು ಬಂತು. ಕೊಹ್ಲಿ ಕೂಟ ಇದು ಔಟ್ ಇಲ್ಲ ಎಂದಿದ್ದರು. ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ಇದು ಔಟ್ ಅಥವಾ ನಾಟೌಟ್ ನೀವೇ ಹೇಳಿ ಎಂದು ಟ್ವೀಟ್ ಮಾಡಿದ್ದರು.