ಡೆಹರಾಡುನ್‌(ನ.05): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಇಂದು( ಸೋಮವಾರ) 30ನೇ ಹುಟ್ಟುಹಬ್ಬವನ್ನು ಉತ್ತರಾಖಂಡದ ಹರಿದ್ವಾರದಲ್ಲಿ ಆಚರಿಸಿದ್ದಾರೆ. ಶನಿವಾರವೇ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ, ಡೆಹರಾಡುನ್‌ ತಲುಪಿದ್ದರು.

ಹರಿದ್ವಾರದ ಅನಂತ್‌ಧಾಮ್‌ ಆಶ್ರಮಕ್ಕೆ ಕೊಹ್ಲಿ ದಂಪತಿ ಇಂದು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಇಲ್ಲಿನ ಅನಂತ್‌ ಬಾಬಾ, ಅನುಷ್ಕಾ ಕುಟುಂಬದ ಆಧ್ಯಾತ್ಮಿಕ ಗುರು ಆಗಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ, ನ.7ರ ವರೆಗೂ ಡೆಹರಾಡುನ್‌ನಲ್ಲೇ ಉಳಿಯಲಿದ್ದು, ಅವರಿಗೆ ವಿಶೇಷ ಭದ್ರತೆ ನೀಡಲಾಗುತ್ತಿದೆ.

ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ದಿಗ್ಗಜ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20  ಸರಣಿಯಿಂದ ವಿಶ್ರಾಂತಿಯ ಪಡೆದಿರುವ ಕೊಹ್ಲಿ, ಪತ್ನಿ ಅನುಷ್ಕಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.