ಇದೇವೇಳೆ ವೃದ್ದಿಮಾನ್ ಸಾಹ ಟೆಸ್ಟ್ ಟೀಂ ಇಂಡಿಯಾದ ಶ್ರೇಷ್ಠ ಕೀಪರ್ ಎಂದು ಕೊಹ್ಲಿ ಹೇಳಿದ್ದಾರೆ.

ಕೊಲಂಬೊ(ಆ.08): ಚೇತೇಶ್ವರ್ ಪೂಜಾರ ಪ್ರಸ್ತುತ ಟೀಂ ಇಂಡಿಯಾದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್'ಮನ್ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

'ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ನಮ್ಮ ತಂಡದ ಶ್ರೇಷ್ಠ ಬ್ಯಾಟ್ಸ್'ಮನ್'ಗಳು. ಇಬ್ಬರೂ ಸಹ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಅದರಲ್ಲೂ ಪೂಜಾರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಕೇವಲ ಟೆಸ್ಟ್ ಮಾದರಿಯಲ್ಲಿ ಭಾರತವನ್ನು ಪೂಜಾರ ಅವರ ರನ್ ದಾಹ ಹಾಗೂ ತಂಡದ ಯಶಸ್ಸಿಗೆ ಹೆಚ್ಚು ಕೊಡುಗೆ ನೀಡಬೇಕು ಎನ್ನುವ ಅವರ ಶ್ರಮ ಪ್ರತಿಯೊಬ್ಬರಿಗೂ ಮಾದರಿ. ಸೀಮಿತ ಓವರ್ ಕ್ರಿಕೆಟ್ ನಡೆಯುವಾಗ ತಂಡದಿಂದ ದೂರವಿದ್ದು ಬಳಿಕ ಮತ್ತೆ ತಂಡ ಕೂಡಿಕೊಂಡು ಸ್ಥಿರ ಪ್ರದರ್ಶನ ನೀಡುವುದು ಸಾಮಾನ್ಯವಾದ ಕೆಲಸವಲ್ಲ' ಎಂದು ಕೊಹ್ಲಿ ಹೇಳಿದ್ದಾರೆ.

ಇದೇವೇಳೆ ವೃದ್ದಿಮಾನ್ ಸಾಹ ಟೆಸ್ಟ್ ಟೀಂ ಇಂಡಿಯಾದ ಶ್ರೇಷ್ಠ ಕೀಪರ್ ಎಂದು ಕೊಹ್ಲಿ ಹೇಳಿದ್ದಾರೆ.