ಮತ್ತೊಂದು ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli Breaks Another Record
Highlights

 ರನ್ ಮಷಿನ್ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ರೀತಿಯ ಹೊಸ ದಾಖಲೆಯನ್ನು ಬರೆದಿದ್ದಾರೆ. 60 ಪಂದ್ಯಗಳಲ್ಲಿ 2000 ರನ್ ಮೈಲಿಗಲ್ಲು ತಲುಪಿದ ಕೊಹ್ಲಿ, 71 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದ ಬ್ರೆಂಡನ್ ಮೆಕ್ಕಲಂರ ದಾಖಲೆಯನ್ನು ಮುರಿದರು. 

ಮ್ಯಾಂಚೆಸ್ಟರ್: ರನ್ ಮಷಿನ್ ವಿರಾಟ್ ಕೊಹ್ಲಿ ಅಂಬಾಟಿ ರಾಯುಡು ಟಿ 20 ಯಲ್ಲಿ ವೇಗವಾಗಿ 2000 ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. 

ಇಂಗ್ಲೆಂಡ್ ವಿರುದ್ಧ ಮೊದಲ ಟಿ 20 ಪಂದ್ಯದ ವೇಳೆ ವಿರಾಟ್ ಈ ದಾಖಲೆ ಬರೆದರು. 60 ಪಂದ್ಯಗಳಲ್ಲಿ 2000 ರನ್ ಮೈಲಿಗಲ್ಲು ತಲುಪಿದ ಕೊಹ್ಲಿ, 71 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದ ಬ್ರೆಂಡನ್ ಮೆಕ್ಕಲಂರ ದಾಖಲೆಯನ್ನು ಮುರಿದರು. 

2000  ರನ್ ಪೂರೈಸಿದ ವಿಶ್ವದ 4ನೇ ಹಾಗೂ ಭಾರತದ ಮೊದಲ ಆಟಗಾರ ಎನ್ನುವ ಹಿರಿಮೆಗೂ ಕೊಹ್ಲಿ ಪಾತ್ರರಾದರು. ಅಂ.ರಾ.ಟಿ20ಯಲ್ಲಿ ವೇಗದ 1000 ರನ್ ಗಳಿಸಿದ ದಾಖಲೆ ಸಹ ಕೊಹ್ಲಿ ಹೆಸರಲ್ಲೇ ಇದೆ.

loader