Asianet Suvarna News Asianet Suvarna News

ಜಿಮ್‌ ವರ್ಕೌಟ್‌ನಲ್ಲಿ ಕೊಹ್ಲಿಯನ್ನು ಮೀರಿಸಿದ ಅನುಷ್ಕಾ!

ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜಿಮ್ ವರ್ಕೌಟ್ ಇದೀಗ ವೈರಲ್ ಆಗಿದೆ. ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ವಾಪಾಸ್ಸಾದ ಕೊಹ್ಲಿ ಹಾಗೂ ಅನುಷ್ಕಾ ಜಿಮ್‌ ಕಸರತ್ತು ನಡೆಸಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮೊದಲು ಕೊಹ್ಲಿ ವರ್ಕೌಟ್ ವಿಡಿಯೋ ವೈರಲ್ ಆಗಿದೆ.

Virat kohli anushka sharma gym work out videos goes viral before west indies tour
Author
Bengaluru, First Published Jul 22, 2019, 4:54 PM IST
  • Facebook
  • Twitter
  • Whatsapp

ಮುಂಬೈ(ಜು.22): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟೆಸ್ಟ್ ಕ್ರಿಕೆಟರ್ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಕೊಹ್ಲಿ ಫಿಟ್ ಆಗಿರಲು ಅಭ್ಯಾಸ, ಜಿಮ್ ಸೇರಿದಂತೆ ಹಲವು ಕಸರತ್ತು ಮಾಡುತ್ತಾರೆ. ಕೊಹ್ಲಿ ವಿಶ್ರಾಂತಿಯಲ್ಲಿರಲಿ, ತಂಡದಲ್ಲಿದಲಿ ಪ್ರತಿ ದಿನ ಜಿಮ್ ವರ್ಕೌಟ್ ತಪ್ಪಿಸುವುದಿಲ್ಲ. ಇದೀಗ ಜಿಮ್ ವರ್ಕೌಟ್‌ನಲ್ಲಿ ಕೊಹ್ಲಿಯನ್ನೇ ಪತ್ನಿ ಅನುಷ್ಕಾ ಶರ್ಮಾ ಮೀರಿಸಿದ್ದಾರೆ. ಕೊಹ್ಲಿ ರೀತಿಯಲ್ಲೇ ವರ್ಕೌಟ್ ಮಾಡಿರುವ ಅನುಷ್ಕಾ ಶರ್ಮಾ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

 

ಇದನ್ನೂ ಓದಿ: ಧೋನಿ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ ಕೊಹ್ಲಿ!

ವಿಶ್ವಕಪ್ ಟೂರ್ನಿ ಬಳಿಕ ಕೆಲ ದಿನಗಳ ಕಾಲ ಲಂಡನ್‌ನಲ್ಲೇ ಉಳಿದುಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಭಾರತಕ್ಕೆ ಮರಳಿದ್ದಾರೆ. ತವರಿಗೆ ಆಗಮಿಸಿದ ಬೆನ್ನಲ್ಲೇ ಭರ್ಜರಿ ವರ್ಕೌಟ್ ಮಾಡಿದ್ದಾರೆ. ಆಗಸ್ಟ್ 3 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

Virat kohli anushka sharma gym work out videos goes viral before west indies tour

ಇದನ್ನೂ ಓದಿ: ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ವಿರಾಟ್ ಕೊಹ್ಲಿ!

ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜಿಮ್ ವರ್ಕೌಟ್ ವಿಡಿಯೋ ವೈರಲ್ ಆಗಿದೆ. ಟ್ವಿಟರ್ ಮೂಲಕ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿರುವ ಕೊಹ್ಲಿ, ಕಠಿಣ ಅಭ್ಯಾಸಕ್ಕೆ ಪರ್ಯಾಯ ಮಾರ್ಗವಿಲ್ಲ ಎಂದಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ, ಟೆಸ್ಟ್ , ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ.
 

Follow Us:
Download App:
  • android
  • ios