Asianet Suvarna News Asianet Suvarna News

ನಂ.1 ಪಟ್ಟಕ್ಕೆ ಇಂಡೋ-ಆಫ್ರಿಕಾ ಫೈಟ್; ಎಬಿಡಿ ಬದಲಿಗೆ ಯಾರು..?

ಸೀಮಿತ ಓವರ್‌'ಗಳ ಸರಣಿಯನ್ನೇ ಹೆಚ್ಚಾಗಿ ಆಡಲಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಸರಣಿಗಳು ವಿಶ್ವಕಪ್‌'ಗೆ ಅಗತ್ಯವಿರುವ ಸಂಯೋಜನೆ ರಚಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ದೃಷ್ಟಿಯಿಂದ, ಆಫ್ರಿಕಾ ವಿರುದ್ಧದ 6 ಪಂದ್ಯಗಳ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದಾಗಿದೆ.

Virat Kohli and crew eye No 1 rank while taking on upbeat Proteas in ODI series

ಡರ್ಬನ್(ಫೆ.01): 3ನೇ ಟೆಸ್ಟ್ ಗೆಲುವಿನಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರದಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆದುಕೊಳ್ಳಲು ಎದುರು ನೋಡುತ್ತಿದೆ. 6 ಪಂದ್ಯಗಳ ಸರಣಿ ಇದಾಗಿದ್ದು, 2019ರ ಐಸಿಸಿ ಏಕದಿನ ವಿಶ್ವಕಪ್‌'ಗೆ 14 ತಿಂಗಳು ಮಾತ್ರ ಉಳಿದಿದ್ದು, ಭಾರತ 2ನೇ ಹಂತದ ತಯಾರಿ ಆರಂಭಿಸಲಿದೆ. ಇಲ್ಲಿನ ಕಿಂಗ್ಸ್'ಮೇಡ್ ಕ್ರೀಡಾಂಗಣ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಈ ವರ್ಷ ಮತ್ತೊಮ್ಮೆ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಮೊದಲು ಭಾರತ ತಂಡಕ್ಕೆ ಹಲವು ಸೀಮಿತ ಓವರ್ ಸರಣಿಗಳ ಸವಾಲು ಎದುರಾಗಲಿದ್ದು, ವಿಶ್ವಕಪ್ ತಯಾರಿಗೆ ನೆರವಾಗಲಿವೆ. ಆಫ್ರಿಕಾ ವಿರುದ್ಧ 6 ಏಕದಿನ, 3 ಟಿ20 ಸರಣಿ, ಲಂಕಾದಲ್ಲಿ ಟಿ20 ತ್ರಿಕೋನ ಸರಣಿ ಬಳಿಕ ಇಂಗ್ಲೆಂಡ್ ಹಾಗೂ ಐರ್ಲೆಂಡ್‌'ನಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲಿರುವ ಭಾರತೀಯ ಆಟಗಾರರು, ಐಪಿಎಲ್‌'ನಲ್ಲೂ ಪಾಲ್ಗೊಳ್ಳಲಿದ್ದಾರೆ. ಜೂನ್‌'ನಲ್ಲಿ ಆಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಆಡಲಿರುವ ತಂಡ, ಆಗಸ್ಟ್‌'ನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್‌'ಗೆ ತೆರಳಲಿದೆ. ಸೀಮಿತ ಓವರ್‌'ಗಳ ಸರಣಿಯನ್ನೇ ಹೆಚ್ಚಾಗಿ ಆಡಲಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಸರಣಿಗಳು ವಿಶ್ವಕಪ್‌'ಗೆ ಅಗತ್ಯವಿರುವ ಸಂಯೋಜನೆ ರಚಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ದೃಷ್ಟಿಯಿಂದ, ಆಫ್ರಿಕಾ ವಿರುದ್ಧದ 6 ಪಂದ್ಯಗಳ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದಾಗಿದೆ.

ಕೊಹ್ಲಿ ಪಡೆಗೆ ಇತಿಹಾಸ ಬರೆಯುವ ತವಕ

ದ.ಆಫ್ರಿಕಾದಲ್ಲಿ ಭಾರತ ತಂಡ ಇದುವರೆಗೂ 4 ದ್ವಿಪಕ್ಷೀಯ ಸರಣಿಯನ್ನಾಡಿದ್ದು, 4ರಲ್ಲೂ ಸೋತಿದೆ. 1992-93ರಲ್ಲಿ 2-5, 2006-07ರಲ್ಲಿ 0-4, 2010-11ರಲ್ಲಿ 2-3 ಹಾಗೂ 2013-14ರಲ್ಲಿ 0-2 ಅಂತರದಲ್ಲಿ ಭಾರತ ಸರಣಿ ಸೋತಿತ್ತು. ಇದರೊಂದಿಗೆ 1996-97 ಹಾಗೂ 2001-02ರಲ್ಲಿ ತ್ರಿಕೋನ ಸರಣಿಯನ್ನೂ ಆಡಿದ್ದ ಭಾರತ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ, ವಿರಾಟ್ ಕೊಹ್ಲಿ ಪಡೆಗೆ ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲುವಿನ ದಾಖಲೆ ಬರೆಯುವ ಅವಕಾಶ ದೊರೆತಿದೆ

ಎಬಿಡಿ ಬದಲಿಗೆ ಯಾರು?: ಆತಿಥೇಯರಿಗೆ ಅನುಭವಿ ಬ್ಯಾಟ್ಸ್‌'ಮನ್ ಎಬಿ ಡಿವಿಲಿಯರ್ಸ್‌ ಮೊದಲ ಮೂರು ಪಂದ್ಯಗಳಿಂದ ಹೊರಬಿದ್ದಿರುವುದು ಭಾರೀ ಹಿನ್ನಡೆ ಉಂಟುಮಾಡಿದೆ.ಫರ್ಹಾನ್ ಬೆಹರ್ದೀನ್, ಅನೇಕ ಬಾರಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ತಂಡಕ್ಕೆ ನೆರವಾಗಿದ್ದರೆ. ಆದರೆ ಈ ಬಾರಿ ಅವರಿಗೆ ಸ್ಥಾನ ದೊರೆತಿಲ್ಲ. ಹೀಗಾಗಿ, ಸ್ಥಳೀಯ ಆಟಗಾರ ಖಯೆಲಿಹ್ಲೆ ಜೊಂಡೊ ಏಕದಿನಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಇಲ್ಲವಾದಲ್ಲಿ, ಡಿ ಕಾಕ್ ಹಾಗೂ ಆಮ್ಲಾರನ್ನು ಆರಂಭಿಕರಾಗಿ ಆಡಿಸಿ, ಏಡನ್ ಮಾರ್ಕ್‌'ರಮ್'ರನ್ನು ಮಧ್ಯಮ ಕ್ರಮಾಂಕದಲ್ಲಿ ಪ್ರಯೋಗ ಮಾಡುವ ಸಾಧ್ಯತೆಯೂ ಇದೆ. ಹರಿಣ ಪಡೆ, ಏಕೈಕ ಸ್ಪಿನ್ನರ್ ಅನ್ನು ಆಡಿಸುವ ನಿರೀಕ್ಷೆ ಇದ್ದು ಇಮ್ರಾನ್ ತಾಹಿರ್ ಆ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ.

ಪಂದ್ಯ ಆರಂಭ: ಸಂಜೆ 4.30ಕ್ಕೆ; ನೇರಪ್ರಸಾರ: ಸೋನಿ ಟೆನ್

Follow Us:
Download App:
  • android
  • ios