ನವದೆಹಲಿ[ಮಾ.05]: ತಮ್ಮ ವಿವಾಹದ ಸುದ್ದಿಯನ್ನು ಗೌಪ್ಯವಾಗಿಡುವ ಸಲುವಾಗಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಹೆಸರು ಬದಲಿಸಿಕೊಂಡಿದ್ದರು ಎನ್ನುವ ಸುದ್ದಿ ಬಹಿರಂಗಗೊಂಡಿದೆ. 

ಮದುವೆಯಾಗ್ಬೇಡಿ' ಒಂದೇ ವರ್ಷಕ್ಕೆ ವಿರುಷ್ಕಾ ಸುಸ್ತು!

ಪ್ರತಿಷ್ಠಿತ ನಿಯತಕಾಲಿಕವೊಂದಕ್ಕೆ ಫೋಟೋಶೂಟ್‌ ನಡೆಸಿ, ಸಂದರ್ಶನ ನೀಡಿರುವ ಅನುಷ್ಕಾ, ತಮ್ಮಿಬ್ಬರ ವಿವಾಹಕ್ಕಾಗಿ ಬಾಣಸಿಗರೊಂದಿಗೆ ಮಾತನಾಡುವ ವೇಳೆ ಕೊಹ್ಲಿಯ ಹೆಸರನ್ನು ‘ರಾಹುಲ್‌’ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದೇ ರೀತಿ ಪ್ರತಿಯೊಂದು ವಿಚಾರದಲ್ಲೂ ಬಹಳ ಎಚ್ಚರಿಕೆ ವಹಿಸಿದ್ದಾಗಿ ಹೇಳಿರುವ ಬಾಲಿವುಡ್‌ ನಟಿ, ತಮ್ಮ ವಿವಾಹ ಸಮಾರಂಭದಲ್ಲಿ ಕೇವಲ 42 ಮಂದಿ ಪಾಲ್ಗೊಂಡಿದ್ದರು ಎನ್ನುವ ಕುತೂಹಲಕಾರಿ ವಿಚಾರವನ್ನೂ ಬಹಿರಂಗಗೊಳಿಸಿದ್ದಾರೆ. 

ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

‘ನಮ್ಮಿಬ್ಬರ ಮದುವೆ ಮನೆಯಲ್ಲಿ ನಡೆಯಿತು ಎನ್ನುವ ಭಾವನೆ ಬರಬೇಕು ಎಂದು ನಮಗೆ ಆಸೆಯಿತ್ತು. ಅದಕ್ಕಾಗಿ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರನ್ನಷ್ಟೇ ಆಹ್ವಾನಿಸಲಾಗಿತ್ತು’ ಎಂದು ಅನುಷ್ಕಾ ಹೇಳಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ 2017ರ ಡಿಸೆಂಬರ್’ನಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.