ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವ ಕಾರಣ ಗೊತ್ತಾಯ್ತು : ಮದುವೆ ಡೇಟ್ ಕೂಡ ಫಿಕ್ಸ್'ಯ್ತು !

First Published 6, Dec 2017, 5:57 PM IST
Virat Kohli and Anushka Sharma to get married in Italy next week
Highlights

ಹಲವು ವರ್ಷಗಳಿಂದ ಸ್ನೇಹಿತರು ಹಾಗೂ ಪ್ರೇಮಿಗಳಾಗಿದ್ದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಂತೆ.

ನವದೆಹಲಿ(ಡಿ.06): ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ರೋಹಿತ್ ಶರ್ಮಾ ನಾಯಕರಾಗಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಆದರೆ ಮತ್ತೊಂದು ಸಂತಸದ ವಿಚಾರವೆಂದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾಗುತ್ತಿರುವ ಕಾರಣಕ್ಕಾಗಿಯೇ ಕೊಹ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಡಿದೆ. ಹಲವು ವರ್ಷಗಳಿಂದ ಸ್ನೇಹಿತರು ಹಾಗೂ ಪ್ರೇಮಿಗಳಾಗಿದ್ದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಂತೆ.

ಮೂಲಗಳ ಪ್ರಕಾರ ಇವರಿಬ್ಬರ ವಿವಾಹ ಡಿಸೆಂಬರ್ 22ರಂದು ಇಟಲಿಯ ಅಜ್ಞಾತ ಸ್ಥಳದಲ್ಲಿ ನಡೆಯಲಿದೆಯಂತೆ. ಮದುವೆಯ ದಿನಾಂಕದ ಬಗ್ಗೆ ಇಟಲಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸತ್ಯಾಸತ್ಯತೆ ಬಗ್ಗೆ ಇವರಿಬ್ಬರೆ ತಿಳಿಸಬೇಕಾಗಿದೆ.