ಆಸೀಸ್ ವಿರುದ್ಧದ ಇಂದಿನ ಪಂದ್ಯವನ್ನು ಕೈವಶ ಮಾಡಿಕೊಂಡರೆ, ಕೊಹ್ಲಿ, ಮಾಹಿ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.
ಇಂದೋರ್(ಸೆ.24): ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಳಿಕ ಅದ್ಭುತ ಯಶಸ್ಸು ಸಾಧಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ಮಾಜಿ ನಾಯಕ ಎಂ.ಎಸ್ ಧೋನಿ ದಾಖಲೆ ಸರಿಗಟ್ಟಲು ಸಿದ್ದರಾಗಿದ್ದಾರೆ.
ಹೌದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸದ್ಯ ಟೀಂ ಇಂಡಿಯಾ ಸತತ 8 ಪಂದ್ಯಗಳನ್ನು ಗೆದ್ದಿದೆ. ಇನ್ನು ನವೆಂಬರ್ 2008ರಿಂದ ಫೆಬ್ರವರಿ 2009ರ ವರೆಗೂ ಧೋನಿ ನಾಯಕತ್ವದಲ್ಲಿ ಭಾರತ 9 ಜಯ ಸಾಧಿಸಿತ್ತು.
ಆಸೀಸ್ ವಿರುದ್ಧದ ಇಂದಿನ ಪಂದ್ಯವನ್ನು ಕೈವಶ ಮಾಡಿಕೊಂಡರೆ, ಕೊಹ್ಲಿ, ಮಾಹಿ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.