ಫೋರ್ಬ್ಸ್ ಬಿಡುಗಡೆ ಮಾಡಿದ ಟಾಪ್ 10 ಪಟ್ಟಿಯಲ್ಲಿ ಟೆನಿಸ್ ದಂತಕತೆ ರೋಜರ್ ಫೆಡಡರ್ ನಂ.1 ಸ್ಥಾನದಲ್ಲಿದ್ದರೆ, ಬಾಸ್ಕೆಟ್'ಬಾಲ್ ತಾರೆ ಲೆಬ್ರಾನ್ ಜೇಮ್ಸ್ ಎರಡನೇ ಸ್ಥಾನದಲ್ಲಿದ್ದು, ಉಸೇನ್ ಬೋಲ್ಟ್ 3ನೇ ಸ್ಥಾನದಲ್ಲಿದ್ದಾರೆ.

ನ್ಯೂಯಾರ್ಕ್(ಅ.27): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯದಲ್ಲಿ ಬಾರ್ಸಿಲೋನಾದ ಫುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.

ವಿಶ್ವದ ಅತ್ಯಂತ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಫ್ಯಾಬ್ ನಿಯತ ಕಾಲಿಕೆ ಪ್ರಕಟಿಸಿದ್ದು, ಅಗ್ರ 10ರ ಪಟ್ಟಿಯಲ್ಲಿ ವಿರಾಟ್ 7ನೇ ಸ್ಥಾನದಲ್ಲಿದ್ದಾರೆ. ಇನ್ನು ಮೆಸ್ಸಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ವಿರಾಟ್ ವರ್ಷಕ್ಕೆ 14.5 ಮಿಲಿಯನ್ ಡಾಲರ್(ಅಂದಾಜು ₹ 94 ಕೋಟಿ) ಆದಾಯ ಗಳಿಸುತ್ತಿದ್ದಾರೆ.

ಫೋರ್ಬ್ಸ್ ಬಿಡುಗಡೆ ಮಾಡಿದ ಟಾಪ್ 10 ಪಟ್ಟಿಯಲ್ಲಿ ಟೆನಿಸ್ ದಂತಕತೆ ರೋಜರ್ ಫೆಡಡರ್ ನಂ.1 ಸ್ಥಾನದಲ್ಲಿದ್ದರೆ, ಬಾಸ್ಕೆಟ್'ಬಾಲ್ ತಾರೆ ಲೆಬ್ರಾನ್ ಜೇಮ್ಸ್ ಎರಡನೇ ಸ್ಥಾನದಲ್ಲಿದ್ದು, ಉಸೇನ್ ಬೋಲ್ಟ್ 3ನೇ ಸ್ಥಾನದಲ್ಲಿದ್ದಾರೆ.

ಆಟಗಾರರು ಪಡೆಯುವ ಸಂಭಾವನೆ ಹೊರತು ಪಡಿಸಿ, ಕೇವಲ ಜಾಹಿರಾತಿನಿಂದ ಪಡೆದ ಆದಾಯ ಲೆಕ್ಕ ಹಾಕಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.