ಗಾಯಗೊಂಡಿದ್ದ ಸರ್ಫರಾಜ್ ಖಾನ್'ಗೆ ಸ್ಫೂರ್ತಿ ತುಂಬಿದ್ದು ಯಾರು ಗೊತ್ತಾ..?
ಮುಂಬೈ ಮೂಲದ ಯುವ ಕ್ರಿಕೆಟಿಗ ಸರ್ಫ'ರಾಜ್ ಖಾನ್ ಅವರನ್ನು ಆರ್'ಸಿಬಿ 1.75 ಕೋಟಿ ರುಪಾಯಿ ಕೊಟ್ಟು ಉಳಿಸಿಕೊಂಡಿದೆ. ಸರ್ಫರಾಜ್ 12 ಪಂದ್ಯಗಳನ್ನಾಡಿದ್ದು 29.5ರ ಸರಾಸರಿಯಲ್ಲಿ 177 ರನ್ ಬಾರಿಸಿದ್ದಾರೆ. ಆದರೆ ಅವರ ಸ್ಟ್ರೈಕ್'ರೇಟ್ 173.53 ಇದ್ದು, ಸ್ಫೋಟಕ ಬ್ಯಾಟಿಂಗ್ ನಡೆಸುವ ಕ್ಷಮತೆ ಹೊಂದಿದ್ದಾರೆ.
ಬೆಂಗಳೂರು(ಜ.06): ಕೊಹ್ಲಿಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಫ'ರಾಜ್, ಜಿಮ್'ನಲ್ಲಿ ಬೆವರಿಳಿಸಲು ಆರಂಭಿಸಿದರು. ಜತೆಗೆ ವೇಗವಾಗಿ ಓಡುವುದರ ಕಡೆಗೂ ಗಮನ ನೀಡಿದರು. ಆದರೆ 2017ರ ಐಪಿಎಲ್'ಗೂ ಮುನ್ನ ಗಾಯಗೊಂಡ ಅವರು 6 ತಿಂಗಳ ಕಾಲ ಕ್ರಿಕೆಟ್'ನಿಂದ ದೂರ ಉಳಿಯಬೇಕಾಯಿತು. ಶಸ್ತ್ರಚಿಕಿತ್ಸೆಗೆ ಒಳಗಾದ ಸರ್ಫರಾಜ್, ಚೇತರಿಸಿಕೊಳ್ಳುತ್ತಿದ್ದ ವೇಳೆ ವಿರಾಟ್ ಕೊಹ್ಲಿಯಿಂದ ಬಂದ ಸಂದೇಶವೊಂದು ಅವರಿಗೆ ಸ್ಫೂರ್ತಿ ತುಂಬಿತಂತೆ.
‘ಗಾಯಗೊಂಡು ಮಲಗಿದ್ದಾಗ ಕೊಹ್ಲಿ ನನಗೆ ಸಂದೇಶವೊಂದನ್ನು ಕಳುಹಿಸಿದ್ದರು. ನಿನ್ನನ್ನು ನೀನು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಚಿಂತೆ ಮಾಡಬೇಡ, ಬೇಗ ಗುಣವಾಗುತ್ತೀಯ. ಪ್ರತಿಯೊಂದು ಗಾಯವೂ ನಮ್ಮನ್ನು ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾಗಿಸುತ್ತದೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಕೊಹ್ಲಿ ಬರೆದಿದ್ದರು. ಅವರ ಸಂದೇಶ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು’ ಎಂದು ಸರ್ಫರಾಜ್ ಹೇಳಿದ್ದಾರೆ.