ಮೊದಲ ಟೆಸ್ಟ್’ನಲ್ಲಿ ಕೊಹ್ಲಿ ಬಾರಿಸಿದ್ದು 200 ರನ್, ಉಳಿದವರು..?

First Published 5, Aug 2018, 11:06 AM IST
Virat Kohli 200 runs in two innings Rest of the India batsmen scored 214 runs in 2 innings
Highlights

ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಒಟ್ಟು 200 ರನ್. ಮೊದಲ ಇನ್ನಿಂಗ್ಸ್‌ನಲ್ಲಿ 149 ಹಾಗೂ  2ನೇ ಇನ್ನಿಂಗ್ಸ್‌ನಲ್ಲಿ 51 ರನ್ ಕಲೆಹಾಕಿದರು. ತಂಡದ ಉಳಿದೆಲ್ಲಾ ಆಟಗಾರರು ಸೇರಿ (ಇತರೆ ರನ್ ಹೊರತುಪಡಿಸಿ) ಎರಡು ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಒಟ್ಟು 216 ರನ್ ಮಾತ್ರ. 

ಎಡ್ಜ್’ಬಾಸ್ಟನ್[ಆ.05]: ಇಂಗ್ಲೆಂಡ್ ಆಡಿದ 1000ನೇ ಐತಿಹಾಸಿಕ ಪಂದ್ಯದಲ್ಲಿ ಭಾರತದ ವಿರುದ್ಧ ರೋಚಕ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ್ಯಾವ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಒಟ್ಟು 200 ರನ್. ಮೊದಲ ಇನ್ನಿಂಗ್ಸ್‌ನಲ್ಲಿ 149 ಹಾಗೂ  2ನೇ ಇನ್ನಿಂಗ್ಸ್‌ನಲ್ಲಿ 51 ರನ್ ಕಲೆಹಾಕಿದರು. ತಂಡದ ಉಳಿದೆಲ್ಲಾ ಆಟಗಾರರು ಸೇರಿ (ಇತರೆ ರನ್ ಹೊರತುಪಡಿಸಿ) ಎರಡು ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಒಟ್ಟು 216 ರನ್ ಮಾತ್ರ. 

ಭಾರತ ಸೋತಿದ್ದೆಲ್ಲಿ ಎನ್ನುವುದನ್ನು ಈ ಅಂಕಿ-ಅಂಶವೇ ವಿವರಿಸುತ್ತದೆ. ಪಂದ್ಯದಲ್ಲಿ ಆಟಗಾರನೊಬ್ಬ ಎರಡೂ ಇನ್ನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿ, ಉಳಿದವರು ಒಮ್ಮೆಯೂ 49ರನ್‌ಗಳನ್ನೂ ಗಳಿಸದೆ ಇರುವಂತಹ ಸನ್ನಿವೇಶ ಭಾರತ ಟೆಸ್ಟ್ ತಂಡದ ಮಟ್ಟಿಗೆ ಇದು 6ನೇ ಬಾರಿ.

ಎಡ್ಜ್’ಬಾಸ್ಟನ್’ನಲ್ಲಿ ಏಷ್ಯಾ ತಂಡಕ್ಕಿಲ್ಲ ಜಯ!

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಏಷ್ಯಾ ತಂಡಗಳಿಗೆ ಗೆಲುವಿಲ್ಲ ಎನ್ನುವ ದಾಖಲೆ ಮುಂದುವರಿದೆ. 17 ಪಂದ್ಯಗಳಲ್ಲಿ ಇಲ್ಲಿ ಏಷ್ಯನ್ ತಂಡಗಳು ಜಯ ಸಾಧಿಸಿಲ್ಲ. ಇದೊಂದು ವಿಶ್ವ ದಾಖಲೆ ಸಹ.

loader