World Wrestling championships: ಎರಡನೇ ಬಾರಿಗೆ ಕಂಚು ಗೆದ್ದು ಇತಿಹಾಸ ಬರೆದ ವಿನೇಶ್ ಫೋಗಾಟ್
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕ ಗೆದ್ದು ಇತಿಹಾಸ ಬರೆದ ವಿನೇಶ್ ಫೋಗಾಟ್
ಮೊದಲ ಸುತ್ತಿನಲ್ಲೇ ಸೋಲು ಕಂಡರೂ, ರಿಪಿಕೇಜ್ ಸುತ್ತಿನಲ್ಲಿ ಗೆದ್ದು ಕಂಚಿಗೆ ಕೊರಳೊಡ್ಡಿದ ವಿನೇಶ್
2019ರಲ್ಲಿ ಕಜಕಸ್ತಾನದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪದಕ ಗೆದ್ದಿದ್ದ ವಿನೇಶ್ ಫೋಗಾಟ್
ಬೆಲ್ಗ್ರೇಡ್(ಸೆ.15): ಭಾರತದ ವಿನೇಶ್ ಫೋಗಾಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ವಿನೇಶ್ ಮಹಿಳೆಯರ 53 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಮಂಗೋಲಿಯಾದ ಖುಲಾನ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ಆದರೆ ಖುಲಾನ್ ಫೈನಲ್ ಪ್ರವೇಶಿಸಿದ್ದರಿಂದ ವಿನೇಶ್‌ಗೆ ರಿಪಿಕೇಜ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು. ಇದರ ಲಾಭವೆತ್ತಿದ ವಿನೇಶ್ 2 ಗೆಲುವು ದಾಖಲಿಸಿ ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದರು.
ಕಂಚಿನ ಪದಕದ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್, ಸ್ವೀಡನ್‌ನ ಎಮ್ಮಾ ಜೊನ್ನಾ ವಿರುದ್ಧ 6-0 ಅಂತರದಲ್ಲಿ ಗೆದ್ದು ಪದಕ ತಮ್ಮದಾಗಿಸಿಕೊಂಡರು. ವಿನೇಶ್‌ಗಿದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2ನೇ ಕಂಚಿನ ಪದಕ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ದಾಖಲೆ ಬರೆದಿದ್ದಾರೆ. 2019ರಲ್ಲಿ ಕಜಕಸ್ತಾನದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ವಿನೇಶ್ ಕಂಚು ಜಯಿಸಿದ್ದರು
ಮಾಜಿ ಡೇವಿಸ್ ಕಪ್ ನಾಯಕ ನರೇಶ್ ನಿಧನ
ಕೋಲ್ಕತಾ: ಭಾರತದ ಮಾಜಿ ಡೇವಿಸ್ ಕಪ್ ನಾಯಕ, ದಿಗ್ಗಜ ಟೆನಿಸಿಗ ಲಿಯಾಂಡರ್ ಪೇಸ್‌ರ ಮಾರ್ಗದರ್ಶಕ ನರೇಶ್ ಕುಮಾರ್(93) ಬುಧವಾರ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. 1949ರಲ್ಲಿ ಟೆನಿಸ್‌ಗೆ ಪಾದಾರ್ಪಣೆ ಮಾಡಿದ್ದ ನರೇಶ್, 1952ರಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್‌ನಲ್ಲಿ ಆಡಿದ್ದರು. ಬಳಿಕ ಭಾರತ ತಂಡದ ನಾಯಕರಾಗಿದ್ದರು.
ಡೈಮಂಡ್ ಲೀಗ್ ಗೆಲುವಿನ ಬಳಿಕ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ
1955ರ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನ 4ನೇ ಸುತ್ತಿಗೆ ಪ್ರವೇಶಿಸಿದ್ದರು. ವಿಂಬಲ್ಡನ್‌ನಲ್ಲಿ ದಾಖಲೆಯ 101 ಪಂದ್ಯಗಳನ್ನು ಆಡಿದ್ದರು. 1990ರಲ್ಲಿ ಭಾರತ ಡೇವಿಸ್ ಕಪ್ ತಂಡದ ಆಡದ ನಾಯಕರಾಗಿದ್ದ ನರೇಶ್ 16 ವರ್ಷದ ಪೇಸ್‌ರನ್ನು ಕಣಕ್ಕಿಳಿಸಿ ಟೆನಿಸ್ ಜಗತ್ತಿಗೆ ಹೊಸ ತಾರೆಯನ್ನು ಪರಿಚಯಿಸಿದ್ದರು.
ಡುರಾಂಡ್ ಕಪ್: ಬಿಎಫ್‌ಸಿ, ಎಚ್‌ಎಫ್‌ಸಿ ಸೆಮೀಸ್ ಇಂದು
ಕೋಲ್ಕತಾ: ಪ್ರತಿಷ್ಠಿತ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿರುವ ಬೆಂಗಳೂರು ಎಫ್‌ಸಿ(ಬಿಎಫ್‌ಸಿ), ಗುರುವಾರ ಸೆಮಿಫೈನಲ್‌ನಲ್ಲಿ ಹಾಲಿ ಐಎಸ್‌ಎಲ್ ಚಾಂಪಿಯನ್ ಹೈದರಾಬಾದ್ ಎಫ್‌ಸಿ ವಿರುದ್ಧ ಸೆಣಸಲಿದೆ. ಕಳೆದ ವರ್ಷ ಸೆಮೀಸ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಬಿಎಫ್‌ಸಿ 6-7 ಗೋಲುಗಳಲ್ಲಿ ಸೋಲುಂಡಿತ್ತು. ಆ ಕಹಿ ನೆನಪನ್ನು ಮರೆಯಲು ಚೆಟ್ರಿ ಪಡೆ ಎದುರು ನೋಡುತ್ತಿದೆ. ಪಂದ್ಯಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.