ತವರಿನ ಪ್ರೇಕ್ಷಕರೆದುರು ವಿಜೃಂಬಿಸಿದ 32 ವರ್ಷದ ವಿಜೇಂದರ್ ವೃತ್ತಿಪರ ಬಾಕ್ಸಿಂಗ್'ನಲ್ಲಿ ಸತತ 9ನೇ ಗೆಲುವು ದಾಖಲಿಸಿದರು.

ಮುಂಬೈ(ಆ.05): ಭಾರತದ ಸ್ಟಾರ್ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಚೀನಾ ಆಟಗಾರ ಜುಲ್ಫಿಕರ್ ಮೈಮೈಟಿಯಾಲಿಯನ್ನು ಬಗ್ಗುಬಡಿಯುವ ಮೂಲಕ ಡಬ್ಲ್ಯೂಬಿಓ ಏಷ್ಯಾ ಪೆಸಿಫಿಕಲ್ ಸೂಪರ್ ಮಿಡ್ಲ್‌'ವೇಟ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಎನ್ಎಸ್'ಸಿಐ ಆವರಣದಲ್ಲಿ ನಡೆದ ರೋಚಕ ಕಾದಾಟದಲ್ಲಿ ಪಟ್ಟು ಬಿಡದೇ ಹೋರಾಡಿದ ಮಾಜಿ ಓಲಿಂಪಿಕ್ಸ್ ಪದಕ ವಿಜೇತ ಸತತ ಎರಡನೇ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು.

ತವರಿನ ಪ್ರೇಕ್ಷಕರೆದುರು ವಿಜೃಂಬಿಸಿದ 32 ವರ್ಷದ ವಿಜೇಂದರ್ ವೃತ್ತಿಪರ ಬಾಕ್ಸಿಂಗ್'ನಲ್ಲಿ ಸತತ 9ನೇ ಗೆಲುವು ದಾಖಲಿಸಿದರು.