ವಿಜೇಂದರ್ ಈವರೆಗೆ ಏಳು ಪಂದ್ಯಗಳನ್ನಾಡಿದ್ದು ಆರು ನಾಕೌಟ್‌ಗಳೊಂದಿಗೆ ಎಲ್ಲದರಲ್ಲೂ ಜಯ ಸಾಧಿಸಿದ್ದಾರೆ

ನವದೆಹಲಿ(ನ.14): ಭಾರತದ ಮೊಟ್ಟಮೊದಲ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್, ತಾವು ಹೊಂದಿರುವ ಡಬ್ಲ್ಯೂಬಿಒ ಸೂಪರ್ ಮಿಡಲ್‌ವೇಟ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕಾದರೆ ಡಿ. 17ರಂದು ನಡೆಯಲಿರುವ ಬಾಕ್ಸಿಂಗ್ ಪಂದ್ಯದಲ್ಲಿ ಮಾಜಿ ವಿಶ್ವ ಹಾಗೂ ಅಂತರ ಖಂಡ ಚಾಂಪಿಯನ್ ಎನಿಸಿರುವ ತಾಂಜ್ಸೇನಿಯಾದ ಫ್ರಾನ್ಸಸ್ ಚೆಕಾ ಅವರ ವಿರುದ್ಧ ಗೆಲ್ಲಬೇಕಿದೆ.

ವಿಶ್ವದ ಕೆಲವೇ ಕೆಲವು ಮಿಡಲ್‌ವೇಟ್ ಸೂಪರ್ ಬಾಕ್ಸರ್‌ಗಳಲ್ಲೊಬ್ಬರಾದ 34 ವರ್ಷದ ಚೆಕಾ, ಈವರೆಗೆ ಆಡಿರುವ 43 ಪಂದ್ಯಗಳಲ್ಲಿ 17 ನಾಕೌಟ್‌ಗಳು ಸೇರಿದಂತೆ 32 ಜಯ ಕಂಡಿದ್ದಾರೆ.

ವಿಜೇಂದರ್ ಈವರೆಗೆ ಏಳು ಪಂದ್ಯಗಳನ್ನಾಡಿದ್ದು ಆರು ನಾಕೌಟ್‌ಗಳೊಂದಿಗೆ ಎಲ್ಲದರಲ್ಲೂ ಜಯ ಸಾಧಿಸಿದ್ದಾರೆ