Asianet Suvarna News Asianet Suvarna News

ವಿಜಿಗೆ ಸಾಟಿಯಾಗದ ಚೆಕಾ

ಈ ಗೆಲುವಿನೊಂದಿಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ ಎಂಟನೇ ಗೆಲುವು ಸಾಧಿಸಿದ ವಿಜಿ ತನ್ನ ಅಜೇಯ ಯಾತ್ರೆ ಮುಂದುವರಿಸಿದರು.

Vijender Singh Knocks Out Francis Cheka Retains WBO Title

ನವದೆಹಲಿ(ಡಿ.18): ‘‘ರಿಂಗ್‌'ನ ಆಚೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಏಕೆಂದರೆ, ರಿಂಗ್‌ನೊಳಗೆ ನನ್ನ ಪಂಚ್‌ಗಳೇ ನಾನು ಹೇಳದ್ದೆಲ್ಲವನ್ನೂ ಮಾರ್ದನಿಸುತ್ತವೆ.'' ಅನುಭವಿ ಬಾಕ್ಸರ್‌ ಫ್ರಾನ್ಸಿಸ್‌ ಚೆಕಾ ವಿರುದ್ಧ 3-0 ಅಂತರದಿಂದ ಗೆಲುವು ಪಡೆದು ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಗೆದ್ದ ಬಳಿಕ ಭಾರತದ ನಂ.1 ವೃತ್ತಿಪರ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಆಡಿದ ನುಡಿಗಳಿವು.

ಇಲ್ಲಿನ ತ್ಯಾಗ​ರಾಜ ಒಳಾಂಗಣ ಕ್ರೀಡಾಂಗ​ಣ​ದಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ವಿಜೇಂದರ್‌ ಸಿಂಗ್‌ ಅವರ ಶಕ್ತಿಶಾಲಿ ಹಾಗೂ ಚಾಣಾಕ್ಷ ಪಂಚ್‌ಗಳಿಗೆ ತತ್ತರಿಸಿದ ಚೆಕಾ ಮೂರು ಸುತ್ತಿನಲ್ಲೇ ತಲೆಗಿರಕಿ ಹೊಡೆದು ಕುಸಿದು ಬಿದ್ದರು. ಮೊದಲ ರೌಂಡ್‌ನಲ್ಲಿ 3-1ರಿಂದ ಮೇಲುಗೈ ಮೆರೆದ ವಿಜೇಂದರ್‌, ಆ ನಂತರದ ಎರಡನೇ ಸುತ್ತಿನಲ್ಲಿ 7-3ರ ಮುನ್ನಡೆ ಪಡೆದರು.

ಇನ್ನು ತೃತೀಯ ಸುತ್ತಿನಲ್ಲಂತೂ ಅತ್ಯಂತ ಆಕ್ರಮಣ ಕಾರಿಯಾದ ವಿಜೇಂದರ್‌ ಸಿಂಗ್‌, ಚೆಕಾ ಅವರನ್ನು ಕೆಳಕ್ಕೆ ಕೆಡವಿ ಜಯಭೇರಿ ಬಾರಿಸಿದರು. ಈ ಗೆಲುವಿನೊಂದಿಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ ಎಂಟನೇ ಗೆಲುವು ಸಾಧಿಸಿದ ವಿಜಿ ತನ್ನ ಅಜೇಯ ಯಾತ್ರೆ ಮುಂದುವರಿಸಿದರು.

Follow Us:
Download App:
  • android
  • ios