ಭುಜದ ನೋವಿನಿಂದ ಬಳಲುತ್ತಿರುವ ಮುರುಳಿ ವಿಜಯ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಬೆಂಗಳೂರು(ಮಾ.04): ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಆರಂಭವಾಗಿದ್ದು, ಎರಡನೇ ಓವರ್'ನಲ್ಲಿಯೇ ಟೀಂ ಇಂಡಿಯಾ ಆಘಾತವೆದುರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ಮುರುಳಿ ವಿಜಯ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. 56 ಟೆಸ್ಟ್ ಪಂದ್ಯಗಳ ಬಳಿಕ ಟೀಂ ಇಂಡಿಯಾಗೆ ಆರಂಭಿಕರಾಗಿ ಕಮ್'ಬ್ಯಾಕ್ ಮಾಡಿದ ಅಭಿನವ್ ಮುಕುಂದ್ ಕೇವಲ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಮುಕುಂದ್ ಎಲ್'ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.

ಇನ್ನು ಜಯಂತ್ ಯಾದವ್ ಬದಲಿಗೆ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.