ಶುಕ್ರವಾರ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿ ಮುಂದಿನ 5 ಪಂದ್ಯಗಳಿಗೆ ತಂಡವನ್ನು ಪ್ರಕಟಗೊಳಿಸಿತು. ವಿಂಡೀಸ್‌ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಬಿಸಿಸಿಐ ಅಧ್ಯಕ್ಷರ ಇಲೆವೆನ್‌ ಪರ ಆಡಲು ಆಯ್ಕೆಯಾಗಿರುವ ಕಾರಣ, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌, ಪ್ರಸಿದ್ಧ್ ಕೃಷ್ಣಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. 

ಬೆಂಗಳೂರು(ಸೆ.29): ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಕಾಣುತ್ತಿರುವ ಕರ್ನಾಟಕ ತಂಡದಲ್ಲಿ ಭಾರೀ ಬದಲಾವಣೆಯಾಗಿದೆ. ರಾಜ್ಯ ತಂಡದ ನಾಯಕನ ಸ್ಥಾನವನ್ನು ವಿನಯ್‌ ಕುಮಾರ್‌ ಕಳೆದುಕೊಂಡಿದ್ದು, ಮನೀಶ್‌ ಪಾಂಡೆಗೆ ತಂಡ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಕಳಪೆ ಪ್ರದರ್ಶನ ತೋರಿದ ಕಾರಣ ಹಿರಿಯ ಆಟಗಾರರಾದ ಸ್ಟುವರ್ಟ್‌ ಬಿನ್ನಿ ಹಾಗೂ ಸಿ.ಎಂ.ಗೌತಮ್‌ರನ್ನು ಮುಂದಿನ ಪಂದ್ಯಗಳಿಗೆ ಕೈಬಿಡಲಾಗಿದೆ.

ಶುಕ್ರವಾರ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿ ಮುಂದಿನ 5 ಪಂದ್ಯಗಳಿಗೆ ತಂಡವನ್ನು ಪ್ರಕಟಗೊಳಿಸಿತು. ವಿಂಡೀಸ್‌ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಬಿಸಿಸಿಐ ಅಧ್ಯಕ್ಷರ ಇಲೆವೆನ್‌ ಪರ ಆಡಲು ಆಯ್ಕೆಯಾಗಿರುವ ಕಾರಣ, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌, ಪ್ರಸಿದ್ಧ್ ಕೃಷ್ಣಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಮಯಾಂಕ್‌, ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಗೂ ಆಯ್ಕೆಯಾಗುವ ನಿರೀಕ್ಷೆ ಇದೆ. ಏಷ್ಯಾಕಪ್‌ ಆಡಿದ ಭಾರತ ತಂಡದಲ್ಲಿದ್ದ ಮನೀಶ್‌ ಪಾಂಡೆ, ಭಾನುವಾರ ನಡೆಯಲಿರುವ ವಿದರ್ಭ ವಿರುದ್ಧದ ಪಂದ್ಯದ ವೇಳೆಗೆ ತಂಡ ಕೂಡಿಕೊಳ್ಳಲಿದ್ದಾರೆ.

ತಂಡದ ವಿವರ: ಮನೀಶ್‌ ಪಾಂಡೆ (ನಾಯಕ), ವಿನಯ್‌ ಕುಮಾರ್‌, ಆರ್‌.ಸಮಥ್‌ರ್‍, ಅನಿರುದ್ಧ ಜೋಶಿ, ಪವನ್‌ ದೇಶಪಾಂಡೆ, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಕೌನೇನ್‌ ಅಬ್ಬಾಸ್‌, ಜೆ.ಸುಚಿತ್‌, ಅಭಿಷೇಕ್‌ ರೆಡ್ಡಿ, ಟಿ. ಪ್ರದೀಪ್‌, ನವೀನ್‌ ಎಂ.ಜಿ, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌.