ಫೈನಲ್‌ನಲ್ಲಿ ದೆಹಲಿಯ ಬಲಿಷ್ಠ ಬೌಲಿಂಗ್‌ ಹಾಗೂ ಮುಂಬೈನ ಬಲಿಷ್ಠ ಬ್ಯಾಟಿಂಗ್‌ ಪಡೆಯ ವಿರುದ್ಧ ಪೈಪೋಟಿ ಏರ್ಪಡಲಿದೆ. ನವ್‌ದೀಪ್‌ ಸೈನಿ, ಕುಲ್ವಂತ್‌ ಖೇಜ್ರೋಲಿಯಾ ಚಿನ್ನಸ್ವಾಮಿ ಕ್ರೀಡಾಂಗಣದ ವಾತಾವರಣವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮುಂಬೈಗೆ ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌ರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ಬಲವಿದೆ.

ಬೆಂಗಳೂರು(ಅ.20): ಭಾರತದ ದೇಸಿ ಏಕದಿನ ಪಂದ್ಯಾವಳಿ ವಿಜಯ್‌ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯ ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳು ಸೆಣಸಾಡಲಿವೆ. ಸೆಮೀಸ್‌ನಲ್ಲಿ ಮುಂಬೈ ತಂಡ ಹೈದರಾಬಾದ್‌ ವಿರುದ್ಧ ಗೆದ್ದರೆ ದೆಹಲಿ ತಂಡ ಜಾರ್ಖಂಡ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಫೈನಲ್‌ಗೇರಿತ್ತು.

ಫೈನಲ್‌ನಲ್ಲಿ ದೆಹಲಿಯ ಬಲಿಷ್ಠ ಬೌಲಿಂಗ್‌ ಹಾಗೂ ಮುಂಬೈನ ಬಲಿಷ್ಠ ಬ್ಯಾಟಿಂಗ್‌ ಪಡೆಯ ವಿರುದ್ಧ ಪೈಪೋಟಿ ಏರ್ಪಡಲಿದೆ. ನವ್‌ದೀಪ್‌ ಸೈನಿ, ಕುಲ್ವಂತ್‌ ಖೇಜ್ರೋಲಿಯಾ ಚಿನ್ನಸ್ವಾಮಿ ಕ್ರೀಡಾಂಗಣದ ವಾತಾವರಣವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮುಂಬೈಗೆ ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌ರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ಬಲವಿದೆ.

ಮುಂಬೈ ಪರ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ನಲ್ಲಿ ಆಡಿದ ರೋಹಿತ್‌ ಶರ್ಮಾ ವಿಂಡೀಸ್‌ ವಿರುದ್ಧ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡಲು ಗುವಾಹಟಿ ತಲುಪಿದ್ದಾರೆ. ಮುಂಬೈ ಅತ್ಯುತ್ತಮ ಲಯದಲ್ಲಿದ್ದು, ರೋಹಿತ್‌ ಅನುಪಸ್ಥಿತಿ ತಂಡಕ್ಕೆ ಕಾಡುವ ಸಾಧ್ಯತೆ ಕಡಿಮೆ. ಧವಳ್‌ ಕುಲ್ಕರ್ಣಿ, ತುಷಾರ್‌ ದೇಶಪಾಂಡೆ, ಎಡಗೈ ಸ್ಪಿನ್ನರ್‌ ಶಮ್ಸ್‌ ಮುಲಾನಿ ಮುಂಬೈನ ಬೌಲಿಂಗ್‌ ಆಸ್ತ್ರಗಳಾಗಿದ್ದಾರೆ.

ಗೌತಮ್‌ ಗಂಭೀರ್‌ ದೆಹಲಿಯ ಬ್ಯಾಟಿಂಗ್‌ ಆಧಾರವಾಗಿದ್ದು, ಧೃವ್‌ ಶೋರೆ, ನಿತೀಶ್‌ ರಾಣಾ ಹಾಗೂ ಉನ್ಮುಕ್‌್ತ ಚಾಂದ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2