8 ಬಾರಿ ಚಾಂಪಿಯನ್ ಕರ್ನಾಟಕ, ಈ ಋತುವಿನಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಬೆಂಗಳೂರು(ಡಿ.12): 2017-18ರ ರಣಜಿ ಟ್ರೋಫಿಯಲ್ಲಿ ಪ್ರಚಂಡ ಲಯದಲ್ಲಿರುವ ಕರ್ನಾಟಕ, ಸೆಮಿಫೈನಲ್‌'ನಲ್ಲಿ ವಿದರ್ಭ ಸವಾಲನ್ನು ಸ್ವೀಕರಿಸಲಿದೆ. ಡಿ.17ರಿಂದ ಕೋಲ್ಕತಾದಲ್ಲಿ ಪಂದ್ಯ ನಡೆಯಲಿದೆ. ಕರ್ನಾಟಕ, ಭಾನುವಾರವೇ ಮುಂಬೈ ವಿರುದ್ಧದ ತನ್ನ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 20 ರನ್‌'ಗಳ ಗೆಲುವು ಸಾಧಿಸಿ, ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿತ್ತು. 8 ಬಾರಿ ಚಾಂಪಿಯನ್ ಕರ್ನಾಟಕ, ಈ ಋತುವಿನಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ವಿದರ್ಭ ವಿರುದ್ಧ ಉತ್ತಮ ದಾಖಲೆ: 2016-17ರ ಆವೃತ್ತಿಯಲ್ಲಿ ಕರ್ನಾಟಕ ಹಾಗೂ ವಿದರ್ಭ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಬರೋಡಾದಲ್ಲಿ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಕರ್ನಾಟಕ, 189 ರನ್‌'ಗಳ ಭರ್ಜರಿ ಗೆಲುವು ಸಾಧಿಸಿತ್ತು. ವಿದರ್ಭ ಕಳೆದ ಋತುವಿನಲ್ಲಿ ನಾಕೌಟ್ ಪ್ರವೇಶಿಸಲು ಸಹ ವಿಫಲವಾಗಿತ್ತು. ಇನ್ನು 2015-16ರ ಆವೃತ್ತಿಯಲ್ಲೂ ಉಭಯ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಬೆಂಗಳೂರಲ್ಲಿ ನಡೆದಿದ್ದ ಗುಂಪು ಹಂತದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಕ್ವಾರ್ಟರ್ ಫೈನಲ್ ಫಲಿತಾಂಶ

* ಮ.ಪ್ರದೇಶ ವಿರುದ್ಧ ದೆಹಲಿಗೆ 7 ವಿಕೆಟ್ ಜಯ

* ಕೇರಳ ವಿರುದ್ಧ ವಿದರ್ಭಕ್ಕೆ 412 ರನ್ ಜಯ

* ಗುಜರಾತ್-ಬಂಗಾಳ ಪಂದ್ಯ ಡ್ರಾ

(ಬಂಗಾಳಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ)