ಜುಲೈ 15ರ ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ವಿಂಬಲ್ಡನ್ ಟ್ರೋಫಿಗೆ ಯಾರು ಮುತ್ತಿಕ್ಕಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಲಂಡನ್(ಜು.13): ಅಮೆರಿಕಾದ ಅನುಭವಿ ಆಟಗಾರ್ತಿ, 5 ಬಾರಿ ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸುಲಭವಾಗಿ ಫೈನಲ್ ಪ್ರವೇಶಿಸಿದ್ದಾರೆ. 2009ರ ಬಳಿಕ ಮತ್ತೊಮ್ಮೆ ವೀನಸ್ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಎರಡನೇ ಸೆಮಿಫೈನಲ್‌'ನಲ್ಲಿ ವಿಲಿಯಮ್ಸ್, ಬ್ರಿಟನ್‌'ನ ಜೊಹಾನ ಕೊಂತಾ ವಿರುದ್ಧ 6-4, 6-2 ನೇರ ಸೆಟ್‌'ಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದರು.

20ನೇ ವಿಂಬಲ್ಡನ್ ಟೂರ್ನಿಯಾಡುತ್ತಿರುವ ವೀನಸ್, 9ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಇಂದು ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌'ನ ಗಾರ್ಬೈನ್ ಮುಗುರುಜಾ ಪ್ರಭಾವಿಯಾಟದ ನೆರವಿನಿಂದ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಫೈನಲ್'ಗೆ ಲಗ್ಗೆಯಿಟ್ಟಿದ್ದಾರೆ. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಸ್ಲೊವಾಕಿಯಾದ ಮಾಗ್ದಲೆನಾ ರೈಬಾರಿಕೊವಾ ವಿರುದ್ಧ 6-1, 6-1 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಜುಲೈ 15ರ ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ವಿಂಬಲ್ಡನ್ ಟ್ರೋಫಿಗೆ ಯಾರು ಮುತ್ತಿಕ್ಕಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ