Asianet Suvarna News Asianet Suvarna News

ಕೋಚ್ ಸ್ಥಾನಕ್ಕೆ ದೊಡ್ಡ ಗಣೇಶ್ ನಂತರ ಮತ್ತೊಬ್ಬ ಕನ್ನಡಿಗ ಅರ್ಜಿ !

ಮುಂದಿನ ನೂತನ ಕೋಚ್ ಸ್ಥಾನಕ್ಕೆ ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ,ಮಾಜಿ ಸ್ಫೋಟಕ ಬ್ಯಾಟ್ಸ್'ಮೆನ್ ವೀರೇಂದ್ರ ಸೆಹ್ವಾಗ್, ಕರ್ನಾಟಕದ ಆಟಗಾರ ದೊಡ್ಡ ಗಣೇಶ್, ಟಾಮ್ ಮೋಡಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.

Venkatesh Prasad has not applied for India head coach
  • Facebook
  • Twitter
  • Whatsapp

ಮುಂಬೈ(ಜೂ.29): ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗರು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಭಾರತ ತಂಡದ ವೇಗದ ಬೌಲರ್ ಹಾಗೂ ಪ್ರಸ್ತುತ ಕಿರಿಯ ರಾಷ್ಟ್ರೀಯ ಮುಖ್ಯ ಆಯ್ಕೆದಾರರಾದ ಬಿ.ಎಸ್.ವೆಂಕಟೇಶ್ ಪ್ರಸಾದ್ ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಭಾರತ ತಂಡದ ಸಹಾಯಕ ಅಥವಾ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿಯಾಗಿ ನಿರ್ವಹಿಸಲು ಬಹಳ ಉತ್ಸುಕನಾಗಿದ್ದು, ಕ್ರಿಕೆಟ್ ಸಲಹಾ ಮಂಡಳಿಯ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಭರವಸೆಯಿದೆ ಎಂದು' ತಿಳಿಸಿದ್ದಾರೆ. ವೇಗದ ಬೌಲರ್'ಆಗಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ವೆಂಕಟೇಶ್ ಪ್ರಸಾದ್ 90ರ ದಶಕದಲ್ಲಿ 33 ಟೆಸ್ಟ್'ಗಳಿಂದ 96 ಹಾಗೂ 162 ಏಕದಿನ ಪಂದ್ಯಗಳಿಂದ 196 ವಿಕೇಟ್'ಗಳನ್ನು ಕಬಳಿಸಿದ್ದಾರೆ.

ಭಾರತದ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಈಗಾಗಲೇ ರಾಜೀನಾಮೆ ನೀಡಿದ್ದು, ವೆಸ್ಟ್'ಇಂಡೀಸ್ ಪ್ರವಾಸಕ್ಕೆ ಸಂಜಯ್ ಬಂಗಾರ್ ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಮುಂದಿನ ನೂತನ ಕೋಚ್ ಸ್ಥಾನಕ್ಕೆ ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ,ಮಾಜಿ ಸ್ಫೋಟಕ ಬ್ಯಾಟ್ಸ್'ಮೆನ್ ವೀರೇಂದ್ರ ಸೆಹ್ವಾಗ್, ಕರ್ನಾಟಕದ ಆಟಗಾರ ದೊಡ್ಡ ಗಣೇಶ್, ಟಾಮ್ ಮೋಡಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.

Follow Us:
Download App:
  • android
  • ios