ವಿಶ್ವಕಪ್’ನಲ್ಲಿ ಮೊದಲ ಬಾರಿ ವಿಡಿಯೋ ಸಹಾಯಕ ರೆಫ್ರಿ!

VAR System Used For First Time In World Cup History To Award Penalty
Highlights

ವಿಡಿಯೋ ಸಹಾಯಕ ರೆಫ್ರಿ (ವಿಎಆರ್) ಫುಟ್ಬಾಲ್‌ನಲ್ಲಿ ಪರಿಚಯಗೊಂಡಿರುವ ಆಧುನಿಕ ತಂತ್ರಜ್ಞಾನ. ಪಂದ್ಯದ ವೇಳೆ ಗೋಲು ಇಲ್ಲವೇ ಫೌಲ್‌ಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾದಾಗ, ಇದರ ಸಹಾಯದಿಂದ ರೆಫ್ರಿ ಮೈದಾನದ ಒಂದು ಬದಿಯಲ್ಲಿರುವ ಟೀವಿ ಪರದೆ ಮೇಲೆ ನಿರ್ದಿಷ್ಟ ದೃಶ್ಯಗಳನ್ನು ಹಲವು ಬಾರಿ ವೀಕ್ಷಿಸಿ ತಮ್ಮ ನಿರ್ಧಾರವನ್ನು ಬದಲಿಸಬಹುದು.

ಕಜಾನ್[ಜೂ.17]: ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಿಡಿಯೋ ಸಹಾಯಕ ರೆಫ್ರಿ(ವಿಎಆರ್) ಪದ್ಧತಿ ಬಳಕೆಯಾಗಿದೆ. ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಫ್ರಾನ್ಸ್‌ನ ಆ್ಯಂಟೋನಿ ಗ್ರಿಜ್‌ಮನ್ ಬಾಕ್ಸ್ ಒಳಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಯತ್ನದಲ್ಲಿ ನೆಲಕ್ಕೆ ಬಿದ್ದರು. ಆದರೆ ತಕ್ಷಣಕ್ಕೆ ರೆಫ್ರಿ, ಫೌಲ್ ಎಂದು ಪರಿಗಣಿಸಿ ಪೆನಾಲ್ಟಿ ಕಿಕ್ ನೀಡಲಿಲ್ಲ.

ಫ್ರಾನ್ಸ್ ಆಟಗಾರರು ಪೆನಾಲ್ಟಿಗಾಗಿ ಒತ್ತಾಯಿಸಿದಾಗ ಪಂದ್ಯದ ಮುಖ್ಯ ರೆಫ್ರಿಯಾಗಿದ್ದ ಉರುಗ್ವೆಯ ಆ್ಯಂಡ್ರೆಸ್ ಕುನ್ಹಾ, ನಿರ್ಧಾರ ಮರು ಪರಿಶೀಲನೆಗೆ ಮುಂದಾದರು. ವಿಡಿಯೋ ರೆಫ್ರಿ ಅರ್ಜೆಂಟೀನಾದ ಮೌರೊ ವಿಗ್ಲಿಯಾನೊ ನೆರವು ಕೋರಿದರು. ಪ್ರಸಂಗದ ದೃಶ್ಯಗಳನ್ನು ಹಲವು ಬಾರಿ ಪರಿಶೀಲಿಸಿದ ವಿಡಿಯೋ ರೆಫ್ರಿ, ಫೌಲ್ ಆಗಿರುವುದನ್ನು ದೃಢ ಪಡಿಸಿ ರೆಫ್ರಿಗೆ ಪೆನಾಲ್ಟಿ ನೀಡಬಹುದು ಎಂದು ಸೂಚಿಸಿದರು. ಫ್ರಾನ್ಸ್ ಪೆನಾಲ್ಟಿ ಅವಕಾಶ ಪಡೆದು ಗೋಲಿನ ಖಾತೆ ತೆರೆಯಿತು.

ಏನಿದು ವಿಎಆರ್ ತಂತ್ರಜ್ಞಾನ? 

ವಿಡಿಯೋ ಸಹಾಯಕ ರೆಫ್ರಿ (ವಿಎಆರ್) ಫುಟ್ಬಾಲ್‌ನಲ್ಲಿ ಪರಿಚಯಗೊಂಡಿರುವ ಆಧುನಿಕ ತಂತ್ರಜ್ಞಾನ. ಪಂದ್ಯದ ವೇಳೆ ಗೋಲು ಇಲ್ಲವೇ ಫೌಲ್‌ಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾದಾಗ, ಇದರ ಸಹಾಯದಿಂದ ರೆಫ್ರಿ ಮೈದಾನದ ಒಂದು ಬದಿಯಲ್ಲಿರುವ ಟೀವಿ ಪರದೆ ಮೇಲೆ ನಿರ್ದಿಷ್ಟ ದೃಶ್ಯಗಳನ್ನು ಹಲವು ಬಾರಿ ವೀಕ್ಷಿಸಿ ತಮ್ಮ ನಿರ್ಧಾರವನ್ನು ಬದಲಿಸಬಹುದು. ಇದಕ್ಕೆ ವಿಡಿಯೋ ರೆಫ್ರಿಯ ನೆರವು ದೊರೆಯಲಿದೆ.

ವಿಡಿಯೋ ರೆಫ್ರಿ, ಮೈದಾನದಲ್ಲಿರುವ ಮುಖ್ಯ ರೆಫ್ರಿಗೆ ನಿರ್ಧಾರ ಬದಲಿಸುವಂತೆ ಶಿಫಾರಸು ಮಾಡಬಹುದು ಅಷ್ಟೇ. ಅಂತಿಮ ನಿರ್ಧಾರ ಮೈದಾನದಲ್ಲಿರುವ ರೆಫ್ರಿಯದ್ದೇ ಆಗಿರುತ್ತದೆ. ದೃಶ್ಯಗಳನ್ನು ಪರಿಶೀಲಿಸಿದ ಬಳಿಕವೂ ರೆಫ್ರಿಗೆ ತಾವು ಮೊದಲು ನೀಡಿದ್ದ ತೀರ್ಪು ಸರಿ ಎನಿಸಿದರೆ, ಅದನ್ನೇ ಉಳಿಸಿಕೊಳ್ಳುವ ಅಧಿಕಾರವಿದೆ.

loader