30 ವರ್ಷದ ಜಮೈಕಾದ ವೇಗದ ದೊರೆ ಬೋಲ್ಟ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 8 ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮೊನಾಕೊ(ಜು.22): ಶರವೇಗದ ಓಟಗಾರ ಉಸೇನ್ ಬೋಲ್ಟ್ ಡೈಮಂಡ್ ಲೀಗ್‌'ನ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ.

ವೃತ್ತಿಬದುಕಿನ ವಿದಾಯದ ಅಂಚಿನಲ್ಲಿರುವ ಬೋಲ್ಟ್ 100 ಮೀಟರ್ ಓಟವನ್ನು ಕೇವಲ 9.95 ಸೆಕೆಂಡ್‌'ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಇನ್ನು ಅಮೆರಿಕ ಇಶಾಯ್ ಯಂಗ್ 9.98 ಸೆಕೆಂಡ್‌'ನಲ್ಲಿ ಗುರಿ ಮುಟ್ಟುವ ಮೂಲಕ ಬೋಲ್ಟ್‌'ಗೆ ತೀವ್ರ ಪೈಪೋಟಿ ನೀಡಿ 2ನೇ ಸ್ಥಾನಕ್ಕೆ ತೃಪ್ತರಾದರು. 10.02 ಸೆಕೆಂಡ್ ತೆಗೆದುಕೊಂಡ ದಕ್ಷಿಣ ಆಫ್ರಿಕಾದ ಅಕಾನಿ ಸಿಂಬೈನಿ 3ನೇ ಸ್ಥಾನ ಗಳಿಸಿದರು.

ಮುಂದಿನ ತಿಂಗಳು ಲಂಡನ್‌'ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್ ಬೋಲ್ಟ್ ಪಾಲಿನ ಕೊನೆಯ ಕ್ರೀಡಾಕೂಟವಾಗಿದ್ದು, ಇದಾದ ಬಳಿಕ ಬೋಲ್ಟ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ.

30 ವರ್ಷದ ಜಮೈಕಾದ ವೇಗದ ದೊರೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 8 ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.