ಲಂಡನ್(ಜು.21): ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ನಲ್ಲಿ 100 ಮೀಟರ್ ಹಾಗೂ 4/400 ಮೀಟರ್ ರಿಲೇಯಲ್ಲಿ ಸ್ಪರ್ಧಿಸುವುದಾಗಿ ಉಸೇನ್ ಬೌಲ್ಟ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೌಲ್ಟ್, 'ಲಂಡನ್'ನಲ್ಲಿ ಗೆಲ್ಲಬೇಕೆಂಬುದು ನನ್ನ ಗುರಿ. ಆ ಗೆಲುವಿನೊಂದಿಗೆ ವಿದಾಯ ಹೇಳಬೇಕೆಂಬುದು ನನ್ನ ಆಶಯ. ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದು ನನ್ನನ್ನು ಸಾಕಷ್ಟು ಆಘಾತಕ್ಕೆ ಗುರಿ ಮಾಡಿತ್ತು. ಇದೀಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ' ಎಂದಿದ್ದಾರೆ.

ನನ್ನ ಕ್ರೀಡೆಯಲ್ಲಿ ಏನು ಸಾಧ್ಯವೋ ಅದನ್ನೆಲ್ಲಾ ಸಾಧಿಸಿದ್ದೇನೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್ ಬಳಿಕ ಜಮೈಕಾದ ಉಸೇನ್ ಬೌಲ್ಟ್ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ.  

ಬೋಲ್ಟ್ ಓಲಿಂಪಿಕ್ಸ್'ನಲ್ಲಿ 8 ಪದಕ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 11 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.