Asianet Suvarna News Asianet Suvarna News

ಮಾಲ್ಟಾ ಗುತ್ತಿಗೆ ಪ್ರಸ್ತಾಪ ತಿರಸ್ಕರಿಸಿದ ಬೋಲ್ಟ್‌

ಸದ್ಯ ಆಸ್ಪ್ರೇಲಿಯಾದ ಸೆಂಟ್ರಲ್‌ ಕೋಸ್ಟ್‌ ಮೆರೈನ​ರ್ಸ್ ತಂಡದೊಂದಿಗೆ ಅನಿರ್ದಿಷ್ಟ ಅವಧಿಗೆ ಅಭ್ಯಾಸ ನಡೆಸುತ್ತಿರುವ ಬೋಲ್ಟ್‌, ಋುತು ಪೂರ್ವ ಅಭ್ಯಾಸ ಪಂದ್ಯದಲ್ಲಿ 2 ಗೋಲು ಬಾರಿಸಿ ವಿಶ್ವದ ಗಮನ ಸೆಳೆದಿದ್ದರು.

Usain Bolt rejects Malta football offer Says Report
Author
Sidney, First Published Oct 20, 2018, 10:29 AM IST

ಸಿಡ್ನಿ(ಅ.20): ವಿಶ್ವದ ವೇಗದ ಮಾನವ ಉಸೇನ್‌ ಬೋಲ್ಟ್‌, ಮಾಲ್ಟಾ ದೇಶದ ವಲ್ಲೆಟ್ಟಾ ಫುಟ್ಬಾಲ್‌ ಕ್ಲಬ್‌ ನೀಡಿದ್ದ ಗುತ್ತಿಗೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. 

ಸದ್ಯ ಆಸ್ಪ್ರೇಲಿಯಾದ ಸೆಂಟ್ರಲ್‌ ಕೋಸ್ಟ್‌ ಮೆರೈನ​ರ್ಸ್ ತಂಡದೊಂದಿಗೆ ಅನಿರ್ದಿಷ್ಟ ಅವಧಿಗೆ ಅಭ್ಯಾಸ ನಡೆಸುತ್ತಿರುವ ಬೋಲ್ಟ್‌, ಋುತು ಪೂರ್ವ ಅಭ್ಯಾಸ ಪಂದ್ಯದಲ್ಲಿ 2 ಗೋಲು ಬಾರಿಸಿ ವಿಶ್ವದ ಗಮನ ಸೆಳೆದಿದ್ದರು. ಬೋಲ್ಟ್‌, ಮೆರೈನ​ರ್ಸ್ ತಂಡದಿಂದಲೇ ಗುತ್ತಿಗೆ ಪಡೆಯುವ ನಿರೀಕ್ಷೆಯಲ್ಲಿದ್ದು, ಜಗತ್ತಿನ ವಿವಿಧ ದೇಶಗಳ ಫುಟ್ಬಾಲ್‌ ಕ್ಲಬ್‌ಗಳಿಂದ ಬರುತ್ತಿರುವ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ. 

ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದ ಬಳಿಕ, ಬೋಲ್ಟ್‌ ವೃತ್ತಿಪರ ಫುಟ್ಬಾಲಿಗನಾಗುವತ್ತ ಗಮನ ಹರಿಸಿದ್ದಾರೆ.

Follow Us:
Download App:
  • android
  • ios