ರಷ್ಯಾ ಆಟಗಾರನ ವಿರುದ್ಧ ಫೆಡರರ್ 17 ಬಾರಿ ಸೆಣಸಿದ್ದು, ಎಲ್ಲಾ 17 ಪಂದ್ಯಗಳನ್ನೂ ಗೆದ್ದುಕೊಂಡಿದ್ದಾರೆ.
ನ್ಯೂಯಾರ್ಕ್(ಸೆ.01): ಮಾಜಿ ಚಾಂಪಿಯನ್ನರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಅಂತಿಮ 32ರ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಸತತ ಎರಡನೇ ಪಂದ್ಯದಲ್ಲಿ ಐದು ಸೆಟ್ ಸೆಣಸಾಡಿದ ಫೆಡರರ್ ರಷ್ಯಾದ ಮಿಖಾಯಿಲ್ ಯುಜೆನಿ ವಿರುದ್ಧ 6-1, 6-7, 4-6, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟರು.
ರಷ್ಯಾ ಆಟಗಾರನ ವಿರುದ್ಧ ಫೆಡರರ್ 17 ಬಾರಿ ಸೆಣಸಿದ್ದು, ಎಲ್ಲಾ 17 ಪಂದ್ಯಗಳನ್ನೂ ಗೆದ್ದುಕೊಂಡಿದ್ದಾರೆ.
ಇದೇ ವೇಳೆ ವಿಶ್ವ ನಂ.1 ನಡಾಲ್ ಜಪಾನ್'ನ ತಾರೊ ಡೇನಿಯಲ್ ವಿರುದ್ಧ 4-6,6-3,6-2,6-2 ಸೆಟ್'ಗಳಲ್ಲಿ ಜಯಿಸಿದರು. ಮೊದಲ ಸೆಟ್ ಸೋತು ಆಘಾತ ಎದುರಿಸಿದ ನಡಾಲ್, ಆ ನಂತರ ಎಚ್ಚೆತ್ತುಕೊಂಡು ಮುಂದಿನ 3 ಸೆಟ್'ಗಳಲ್ಲಿ ಪ್ರಾಬಲ್ಯ ಮೆರೆದರು.
ಐದು ಬಾರಿ ಯುಎಸ್ ಚಾಂಪಿಯನ್ ಫೆಡರರ್ ಮುಂದಿನ ಸುತ್ತಿನಲ್ಲಿ ಸ್ಪೇನ್'ನ ಫೆಲಿಸಿಯಾನೊ ಲೊಪೆಜ್ ವಿರುದ್ಧ ಸೆಣಸಲಿದ್ದಾರೆ. ಅವರ ವಿರುದ್ಧ ಸ್ವಿಜರ್'ಲೆಂಡ್ ಆಟಗಾರ 12-0 ದಾಖಲೆ ಹೊಂದಿದ್ದಾರೆ.
