ಇಲ್ಲಿಗೆ ಯುಎಸ್ ಓಪನ್'ನಲ್ಲಿ ಸಾನಿಯಾ ಹಾಗೂ ಬೋಪಣ್ಣ ಹೋರಾಟ ಅಂತ್ಯವಾಗಿಲ್ಲ. ರೋಹನ್ ಬೋಪಣ್ಣ ಮಿಶ್ರ ಡಬಲ್ಸ್'ನಲ್ಲಿ ಕೆನಡಾದ ಆಟಗಾರ್ತಿ ಗೇಬ್ರಿಯೆಲ್ ದಾಬ್ರೋವಸ್ಕಿಯೊಂದಿಗೆ ಕಣಕ್ಕಿಳಿಯಲಿದ್ದರೆ, ಸಾನಿಯ ಮಹಿಳೆಯರ ಡಬಲ್ಸ್'ನಲ್ಲಿ ಚೀನಾದ ಆಟಗಾರ್ತಿ ಪೆಂಗ್ ಶುವಾಯ್ ಅವರೊಂದಿಗೆ ಹೋರಾಟ ಮುಂದುವರೆಸಲಿದ್ದಾರೆ.
ನ್ಯೂಯಾರ್ಕ್(ಸೆ.02): ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತಕ್ಕಿಂದು ಮಿಶ್ರ ಫಲಿತಾಂಶ ದೊರೆತಿದೆ.
ಭಾರತದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರೆ, ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಸೋಲು ಕಂಡಿದ್ದಾರೆ.
ಪೇಸ್ ಹಾಗೂ ರಾಜಾ ಜೋಡಿ ಮೊದಲ ಸುತ್ತಿನಲ್ಲಿ ಸರ್ಬಿಯಾದ ಜಾನ್ಕೊ ತಿಪ್'ಸ್ಕ್ರೋವಿಚ್ ಹಾಗೂ ವಿಕ್ಟರ್ ಟ್ರೊಯ್ಕಿ ವಿರುದ್ಧ 6-1, 6-3 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.
ಇನ್ನು ಟೂರ್ನಿಯ 10ನೇ ಶ್ರೇಯಾಂಕಿತ ಬೋಪಣ್ಣ ಹಾಗೂ ಪಾಬ್ಲೊ ಕ್ಯೂವಾಸ್ ಜೋಡಿ ಪುರುಷರ ಡಬಲ್ಸ್'ನಲ್ಲಿ ಯುಎಸ್ ಓಪನ್ ಮಾಜಿ ಚಾಂಪಿಯನ್ ಫ್ಯಾಬಿಯೊ ಫೊಗ್ನಿನಿ ಹಾಗೂ ಸಿಮೊನ್ ಬೊಲಿಲಿ ವಿರುದ್ಧ 7-5, 4-6, 4-6 ಸೆಟ್'ಗಳಲ್ಲಿ ಸೋತರೆ, ಮಿಶ್ರ ಡಬಲ್ಸ್'ನಲ್ಲಿ ಸಾನಿಯಾ ಹಾಗೂ ಇವಾನ್ ಡಾಡಿಗ್ ಜೋಡಿ ಪ್ರೆಂಚ್ ಜೋಡಿಯಾದ ಎಲೆನಾ ಆಸ್ಟಪೆನ್ಕೊ ಹಾಗೂ ಫ್ಯಾರ್ಬೈಸ್ ಮಾರ್ಟಿನ್ ವಿರುದ್ಧ 7-5, 3-6,6-10 ಸೆಟ್'ಗಳಲ್ಲಿ ಶರಣಾದರು.