ನ್ಯೂಯಾರ್ಕ್(ಸೆ.11): ಜರ್ಮನಿಯ ಆಂಜಲಿಕ ಕೆರ್ಬರ್ ಯುಎಸ್ ಓಪನ್ನ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ದ್ವಿತೀಯ ಶ್ರೇಯಾಂಕಿತೆ ಕೆರ್ಬರ್, 10ನೆ ಶ್ರೇಯಾಂಕಿತ ಪಿಸ್ಕೋವಾರನ್ನು 6-3, 4-6, 6-4 ಸೆಟ್ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ವಿಶ್ವದ ನಂಬರ್ ವನ್ ಪಟ್ಟವನ್ನು ಅಲಂಕರಿಸಿದ್ದಾರೆ.
ಕೆರ್ಬರ್ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಕೆರ್ಬರ್ ಇದೀಗ ಅಮೆರಿಕನ್ ಓಪನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದಲ್ಲದೇ ಒಂದೇ ವರ್ಷದಲ್ಲಿ ಎರಡು ಗ್ರ್ಯಾಂಡ್ಸ್ಲ್ಯಾಮ್ ಗೆದ್ದ ಹಿರಿಮೆಗೆ ಪಾತ್ರರಾದರು.
