ತಂಡದ ಎಲ್ಲಾ ಆಟಗಾರರು ಕುಕ್ ಅವರ ಆಟವನ್ನೆ ನೆಚ್ಚಿಕೊಂಡಿದ್ದಾರೆ ಎಂದು ಫಾಬ್ರೇಸ್ ತಿಳಿಸಿದರು.
ಲಂಡನ್(ಡಿ.22): ಮುಂಬರುವ ಆ್ಯಷಸ್ ಟೆಸ್ಟ್ ಸರಣಿ ವೇಳೆಗೆ ಅಲಸ್ಟೇರ್ ಕುಕ್ ಉತ್ತಮ ಬ್ಯಾಟಿಂಗ್ ಫಾರ್ಮ್‌ನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಇಂಗ್ಲೆಂಡ್ ತಂಡದ ಸಹ ಕೋಚ್ ಪಾಲ್ ಫಾಬ್ರೇಸ್ ಹೇಳಿದ್ದಾರೆ.
ತಂಡದ ಎಲ್ಲಾ ಆಟಗಾರರು ಕುಕ್ ಅವರ ಆಟವನ್ನೆ ನೆಚ್ಚಿಕೊಂಡಿದ್ದಾರೆ ಎಂದು ಫಾಬ್ರೇಸ್ ತಿಳಿಸಿದರು.
ಕೆಲ ದಿನಗಳ ಹಿಂದಷ್ಟೇ ಮುಕ್ತಾಯ ಕಂಡ ಭಾರತ ವಿರುದ್ಧದ ಸರಣಿಯಲ್ಲಿ 4-0ಯಿಂದ ಸೋಲುಂಡ ಇಂಗ್ಲೆಂಡ್ ತಂಡ ಆ್ಯಷಸ್ ಸರಣಿಗೆ ಮತ್ತೆ ಪ್ರಭಾವಿ ಆಟ ತೋರಬೇಕಿದೆ. ಇಂಗ್ಲೆಂಡ್ ಮತ್ತೆ ಫಾರ್ಮ್‌ಗೆ ಮರಳಬೇಕೆಂದರೆ ಕುಕ್ ತಂಡದ ನಾಯಕತ್ವದಲ್ಲಿ ಮುಂದುವರೆದು ಪ್ರಭಾವಿ ಪ್ರದರ್ಶನ ನೀಡಬೇಕಿದೆ ಎಂದು ಫಾಬ್ರೇಸ್ ಹೇಳಿದರು.
