ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಂದರೆ ಸಾಕು ಉಭಯ ದೇಶಗಳ ಅಭಿಮಾನಿಗಳಿಗೆ ಗೆಲುವು ಮುಖ್ಯ. ಇದು ಪ್ರತಿಷ್ಠೆಯ ಹೋರಾಟ ಕೂಡ ಹೌದು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿ ಮುಖಾಮುಖಿಯಲ್ಲೂ ಪಾಕಿಸ್ತಾನ ತಂಡವನ್ನ ಮಣಿಸಿದೆ. ಅದರಲ್ಲೂ 2015 ವಿಶ್ವಕಪ್ ಪಂದ್ಯ ಯಾರು ಮರೆತಿಲ್ಲ. ಈ ಪಂದ್ಯದಲ್ಲಿ ಸ್ಫಾಟ್ ಫಿಕ್ಸಿಂಗ್ ಮಾಡುವಂತೆ ಪಾಕ್ ಕ್ರಿಕೆಟಿಗನಿಗೆ ಬುಕ್ಕಿ ಕೋಟಿ ಕೋಟಿ ಆಫರ್ ನೀಡಿದ್ದರು. ಯಾವ ಕ್ರಿಕೆಟಿಗನಿಗೆ ಬಂದಿತ್ತು ಆಫರ್? ಏನಿದು ಪ್ರಕರಣ? ಇಲ್ಲಿದೆ.
ಕರಾಚಿ(ಜೂ.24): 2015ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದ ಹೋರಾಟ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಜೊತೆಗೆ ಮೌಕಾ ಮೌಕಾ ಜಾಹೀರಾತು ಕೂಡ ಉಭಯ ದೇಶಗಳು ಅಭಿಮಾನಿಗಳಲ್ಲಿನ ಗೆಲ್ಲಲೇಬೇಕೆಂಬ ಛಲವನ್ನ ಮತ್ತಷ್ಟು ಗಟ್ಟಿಗೊಳಿಸಿತು. ಆದರೆ ಇದೇ ಪಂದ್ಯದಲ್ಲಿ ಸ್ಫಾಟ್ ಫಿಕ್ಸಿಂಗ್ ಮಾಡುವಂತೆ ಬುಕ್ಕಿಯೋರ್ವ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್‌ಗೆ ಅಫರ್ ನೀಡಿದ್ದ ಅನ್ನೋದನ್ನ ಸ್ವತಃ ಅಕ್ಮಲ್ ಬಹಿರಂಗ ಪಡಿಸಿದ್ದಾರೆ.
ಪಾಕಿಸ್ತಾನದ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಕ್ಮಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಭಾರತ ವಿರುದ್ಧದ ಪಂದ್ಯ ಆಡದಂತೆ ಹಾಗೂ ಆಡಿದರೆ 2 ಡಾಟ್ ಬಾಲ್ ಆಡುವಂತೆ ಬುಕ್ಕಿ ಸಂಪರ್ಕಿಸಿದ್ದರು ಎಂದು ಅಕ್ಮಲ್ ಹೇಳಿದ್ದಾರೆ. ಇದಕ್ಕಾಗಿ ಬರೋಬ್ಬರಿ 13 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತು ಎಂದು ಅಕ್ಮಲ್ ಬಹಿರಂಗ ಪಡಿಸಿದ್ದಾರೆ.
ಉಮರ್ ಅಕ್ಮಲ್ ಸಂದರ್ಶನ:
ಬುಕ್ಕಿ ಆಫರ್ ತಿರಸ್ಕರಿಸಿದ ಅಕ್ಮಲ್, ತಾನು ಪಾಕಿಸ್ತಾನ ಪರ ಆಡುತ್ತಿದ್ದೇನೆ ಹೊರತು ಯಾವುದೇ ಬುಕ್ಕಿಗಾಗಿ ಅಲ್ಲ ಎಂದಿದ್ದರು. ಇದೀಗ 3 ವರ್ಷಗಳ ಬಳಿಕ ಅಕ್ಮಲ್ ಸ್ಫಾಟ್ ಫಿಕ್ಸಿಂಗ್ ಆಫರ್ ಕುರಿತು ಮಾತನಾಡಿದ್ದಾರೆ. ಫಿಕ್ಸಿಂಗ್ ಕುರಿತು ಹದ್ದಿನ ಕಣ್ಣಿಟ್ಟಿರುವ ಐಸಿಸಿ ಅಕ್ಮಲ್ ಹೇಳಿಕೆಗಳನ್ನ ಗಂಭೀರವಾಗಿ ಪರಿಗಣಿಸಿದರೆ, ಪ್ರಕಣ ಮತ್ತೊಂದು ತಿರುವು ಪಡೆಯೋ ಸಾಧ್ಯತೆ ಇದೆ.
