Asianet Suvarna News Asianet Suvarna News

ಯು ಮುಂಬಾ ದಾಳಿಗೆ ತತ್ತರಿಸಿದ ದಬಾಂಗ್ ಡೆಲ್ಲಿ

ಪಂದ್ಯದ ಮೇಲೆ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದ ಅನೂಪ್ ಪಡೆ ಯಾವುದೇ ಹಂತದಲ್ಲೂ ಡೆಲ್ಲಿ ಪುಟಿದೇಳಲು ಬಿಡಲಿಲ್ಲ.

U Mumba Beat Dabang Delhi easily

ನಾಗ್ಪುರ(ಆ.05): ನಾಯಕ ಅನೂಪ್ ಕುಮಾರ್ ಮತ್ತು ಶಬ್ಬೀರ್ ಬಾಪು ಅವರ ಆಕ್ರಮಣಕಾರಿ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ವಿರುದ್ಧ 36-22 ಅಂಕಗಳ ಅಂತರದಿಂದ ಯು ಮುಂಬಾ ತಂಡ ಸುಲಭದ ಗೆಲುವು ದಾಖಲಿಸಿತು.

ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಯು ಮುಂಬಾ 14-8ರಿಂದ ಮುನ್ನಡೆ ಕಾಯ್ದುಕೊಂಡಿತ್ತು.

30ನೇ ನಿಮಿಷದಲ್ಲಿ ಅನೂಪ್ ಬೋನಸ್ ಮತ್ತು 2 ಅಂಕದೊಂದಿಗೆ ಮೂರು ಅಂಕ ಗಳಿಸಿದರು. ಬಳಿಕ ಸೂಪರ್ ಟ್ಯಾಕಲ್‌'ನಿಂದ ಮುಂಬಾ ಮತ್ತೆ 3 ಅಂಕ ಪಡೆಯುವ ಮೂಲಕ 26-15ರಿಂದ ಮುನ್ನಡೆಯಿತು. ಆ ನಂತರ ಪಂದ್ಯದ ಮೇಲೆ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದ ಅನೂಪ್ ಪಡೆ ಯಾವುದೇ ಹಂತದಲ್ಲೂ ಡೆಲ್ಲಿ ಪುಟಿದೇಳಲು ಬಿಡಲಿಲ್ಲ.

Follow Us:
Download App:
  • android
  • ios