ಮಹೇಂದ್ರ ಸಿಂಗ್ ಧೋನಿ ಇವತ್ತು ಶ್ರೇಷ್ಠ ನಾಯಕ, ಶ್ರೇಷ್ಠ ಆಟಗಾರನಾಗಿದ್ದಾರೆ. ಆದ್ರೆ ಇದಕ್ಕೆ ಕಾರಣ ಇಬ್ಬರು ಮಹಾನ್ ನಾಯಕರು. ಅವರಿಬ್ಬರು ಇಲ್ಲದಿದ್ದರೆ ಇಂದು ಮಹಿ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾದ್ರೆ ಆ ನಾಯಕರು ಮಾಡಿದ್ದಾದ್ರು ಏನು. ಧೋನಿ ಕ್ರಿಕೆಟ್​ ಲೈಫ್ ಚೇಂಜ್ ಆಗಿದ್ದು ಎಲ್ಲಿ. ಇಲ್ಲಿದೆ ವಿವರ 

ಮಹೇಂದ್ರ ಸಿಂಗ್ ಧೋನಿ ಇವತ್ತು ವಿಶ್ವಕಂಡ ಶ್ರೇಷ್ಠ ಆಟಗಾರ, ಶ್ರೇಷ್ಠ ನಾಯಕ. ಆದ್ರೆ ಮಹಿ ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣ ಇಬ್ಬರು ಮಹಾನ್ ನಾಯಕರು. ಧೋನಿ ಕ್ರಿಕೆಟ್ ಲೈಫ್ ಚೇಂಜ್ ಮಾಡಿದ್ದೇ ಈ ಇಬ್ಬರು. ಇವರಿಬ್ಬರು ಇಲ್ಲದಿದ್ದರೆ ಇವತ್ತು ಮಹೇಂದ್ರ ಸಿಂಗ್​ ಧೋನಿ ಎಂಬ ಹೆಸ್ರು ಕಣ್ಮರೆಯಾಗಿ ದಶಕಗಳೇ ಕಳೆದು ಹೋಗ್ತಿತ್ತು. ಇವತ್ತು ಧೋನಿ ಏನೇನು ಸಾಧಿಸಿದ್ದಾರೋ ಅದೆಲ್ಲವೂ ಈ ಇಬ್ಬರಿಂದಲೇ.

ಧೋನಿಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟ ದಾದಾ: ರನ್ ಕೊಳ್ಳೆ ಹೊಡೆದು ಸ್ಥಾನ ಭದ್ರಪಡಿಸಿಕೊಂಡ ಮಹಿ

2004ರಲ್ಲಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಧೋನಿ ಮೊದಲ 4 ಪಂದ್ಯಗಳಲ್ಲಿ ಫೇಲ್ ಆಗಿದ್ದರು. ಆಗ ನಾಯಕರಾಗಿದ್ದ ಸೌರವ್​ ಗಂಗೂಲಿ, ಧೋನಿಗೆ ಬ್ಯಾಟಿಂಗ್ ಪ್ರಮೋಶನ್ ಕೊಟ್ರು. 2005ರಲ್ಲಿ ಪಾಕಿಸ್ತಾನ ವಿರುದ್ಧ ವಿಶಾಖಪಟ್ಟಣದಲ್ಲಿ ತಾವು ಆಡುತ್ತಿದ್ದ 3ನೇ ಕ್ರಮಾಂಕದಲ್ಲಿ ಧೋನಿಯನ್ನ ಕಳುಹಿಸಿದ್ರು. ಆ ಪಂದ್ಯದಲ್ಲಿ ಆರ್ಭಟಿಸಿ ಮಹಿ ಸೆಂಚುರಿ ಸಿಡಿಸಿದ್ರು. ಹೀಗೆ 3ನೇ ಕ್ರಮಾಂಕದಲ್ಲಿ ಸ್ವಲ್ಪ ಮ್ಯಾಚ್​ಗಳನ್ನಾಡಿದ ಧೋನಿ, ರನ್ ಕೊಳ್ಳೆ ಹೊಡೆದ್ರು. ಅಲ್ಲಿಗೆ ತಂಡದಲ್ಲಿ ಅವರ ಸ್ಥಾನ ಭದ್ರವಾಯ್ತು.

ಧೋನಿ ಗ್ರೇಟ್​ ಫಿನಿಶರ್​​ ಮಾಡಿದ್ದು ದ್ರಾವಿಡ್: ಮಹಿಯನ್ನ ಕೆಳ ಕ್ರಮಾಂಕಕ್ಕೆ ತಳ್ಳಿದ್ದೇ ದಿ ವಾಲ್

ಗಂಗೂಲಿ ಕ್ಯಾಪ್ಟನ್ಸಿ ಟೈಮ್​'ನಲ್ಲಿ ಮೇಲಿನ ಕ್ರಮಾಂಕದಲ್ಲಿ ಆಡ್ತಿದ್ದ ಧೋನಿಯನ್ನ ರಾಹುಲ್ ದ್ರಾವಿಡ್ ನಾಯಕನಾದ್ಮೇಲೆ ಕೆಳ ಕ್ರಮಾಂಕದಲ್ಲಿ ಆಡಿಸಿದ್ರು. ಲೋ ಆರ್ಡರ್'​ನಲ್ಲಿ ಮಹಿಯನ್ನ ಬ್ಯಾಟಿಂಗ್ ಕಳುಹಿಸಿದ್ದೇ ದ್ರಾವಿಡ್. ಆದ್ರೆ ಅಲ್ಲಿ ಕೆಟ್ಟ ಹೊಡೆತಗಳಿಂದ ಧೋನಿ ವಿಫಲರಾದ್ರು. ಆದ್ರೆ ದ್ರಾವಿಡ್ ಮಾತ್ರ ಬಿಡಲಿಲ್ಲ. ಕೆಲ ಟಿಪ್ಸ್ ಕೊಟ್ಟಿದ್ದಲ್ಲದೆ ಮಹಿಯನ್ನ ತರಾಟೆಗೂ ತೆಗೆದುಕೊಂಡರು. ಆನಂತರ ಧೋನಿ ವರ್ಲ್ಡ್​​ ಬೆಸ್ಟ್ ಫಿನಿಶರ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ.

ಧೋನಿ ಸಕ್ಸಸ್ ಸಿಕ್ರೇಟ್ ಬಿಚ್ಚಿಟ್ಟ ಸೆಹ್ವಾಗ್: ವೀರೂ ಹೇಳಿದ ಇಬ್ಬರು ಮಹಾನ್ ನಾಯಕರ ಸ್ಟೋರಿ

ಈ ಕುರಿತಾಗಿ ಸ್ವತಃ ಟೀಂ ಇಂಡಿಯಾದಲ್ಲಿದ್ದು ಎಲ್ಲವನ್ನ ಕಣ್ಣಾರೆ ಕಂಡ ವೀರೇಂದ್ರ ಸೆಹ್ವಾಗ್ ಅವರೇ ಧೋನಿ ಸಕ್ಸಸ್ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ. ಇಬ್ಬರು ಮಹಾನ್ ನಾಯಕರು ಸೇರಿಕೊಂಡು ಧೋನಿಯನ್ನ ಗ್ರೇಟ್ ಪ್ಲೇಯರ್​ ಮಾಡಿದ್ದಾರೆ. ಮಹಿಗೆ ಲೈಫ್ ಕೊಟ್ಟಿದ್ದೇ ಇವರಿಬ್ಬರು ಅನ್ನೋ ಸತ್ಯವನ್ನ ಹೊರಹಾಕಿದ್ದಾರೆ.

§ಟೀಂ ಇಂಡಿಯಾ ಆ ಸಮಯದಲ್ಲಿ ಬ್ಯಾಟಿಂಗ್ ಆರ್ಡರ್​​​​ನಲ್ಲಿ ಪ್ರಯೋಗ ಮಾಡುತ್ತಿತ್ತು. ಸೌರವ್ ಗಂಗೂಲಿ ನನಗೆ ಓಪನಿಂಗ್ ಸ್ಥಾನ ಬಿಟ್ಟುಕೊಟ್ಟು 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಈ ಸಮಯದಲ್ಲಿ 3 ಮತ್ತು 4ನೇ ಕ್ರಮಾಂಕದಲ್ಲಿ ಇರ್ಫಾನ್ ಪಠಾಣ್ ಅಥವಾ ಧೋನಿಯನ್ನ ಪಿಚ್ ಹಿಟ್ಟರ್ ಆಗಿ ಕಳುಹಿಸಲು ನಿರ್ಧರಿಸಲಾಯ್ತು. ಆಗ ಧೋನಿಯನ್ನ 3ನೇ ಕ್ರಮಾಂಕದಲ್ಲಿ ಕಳುಹಿಸಲು ಗಂಗೂಲಿ ನಿರ್ಧರಿಸಿದರು. ಅಲ್ಲಿ ಅವರು ಕ್ಲಿಕ್ ಆಗಿ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡರು. ತಮ್ಮ ಕ್ರಮಾಂಕವನ್ನೇ ಬೇರೆ ಆಟಗಾರರಿಗೆ ಬಿಟ್ಟು ಕೆಲವೇ ಕೆಲ ನಾಯಕರಲ್ಲಿ ಗಂಗೂಲಿ ಸಹ ಒಬ್ಬರು. ಗಂಗೂಲಿ ಅಂದು ಧೋನಿಗೆ ಚಾನ್ಸ್ ಕೊಡದಿದ್ದರೆ ಇಂದು ಮಹಿ ಶ್ರೇಷ್ಠ ಆಟಗಾರನಾಗುತ್ತಿರಲಿಲ್ಲ§ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್ ನಾಯಕರಾಗಿದ್ದಾಗ ಧೋನಿ ಫಿನಿಶರ್ ಪಾತ್ರ ನಿರ್ವಹಿಸುತ್ತಿದ್ದರು. ಆರಂಭದ ದಿನಗಳಲ್ಲಿ ಮಹಿ ಕೆಟ್ಟ ಹೊಡೆತಗಳಿಂದ ಔಟಾಗಿ ಬರುತ್ತಿದ್ದರು. ಆಗ ದ್ರಾವಿಡ್ ತರಾಟೆ ತೆಗೆದುಕೊಳ್ಳುತ್ತಿದ್ದರು. ಕೆಲ ಟಿಪ್ಸ್​ಗಳನ್ನೂ ಕೊಡುತ್ತಿದ್ದರು. ಆನಂತರ ಧೋನಿ ಬ್ಯಾಟಿಂಗ್ ಸ್ಟೈಲ್ ಚೇಂಜ್ ಆಯ್ತು. ಗ್ರೇಟ್​ ಫಿನಿಶರ್ ಎನಿಸಿಕೊಂಡರು. ಯುವರಾಜ್ ಸಿಂಗ್ ಜೊತೆಗಿನ ಧೋನಿ ಜೊತೆಯಾಟ ಈಗಲೂ ಅವಿಸ್ಮರಣೀಯ§ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.

ಇಬ್ಬರು ಮಹಾನ್ ನಾಯಕರು ಧೋನಿ ಕ್ರಿಕೆಟ್ ಲೈಫ್ ಅನ್ನ ಹೇಗೆ ಚೇಂಜ್ ಮಾಡಿದ್ದಾರೆ ಅಂತ ತಿಳಿಯಿತು. ಮಹಿ ಲೈಫ್ ಕೊಟ್ಟ ಬಗ್ಗೆ ಈ ಇಬ್ಬರು ಕ್ರಿಕೆಟರ್ಸ್ ಎಂದೂ ಹೇಳಿಲ್ಲ. ಆದ್ರೆ ಅವರ ಜೊತೆಯಲ್ಲೇ ಆಡಿ ಎಲ್ಲವನ್ನೂ ಗಮನಿಸಿ ಸೆಹ್ವಾಗ್ ಈ ಮಾತು ಹೇಳಿದ್ದಾರೆ. ಅದಕ್ಕೆ ಆ ಇಬ್ಬರನ್ನ ಲಜೆಂಡ್ ಕ್ರಿಕೆಟರ್ಸ್ ಅನ್ನೋದು.