ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ನಂ.1 ಡಬಲ್ಸ್ ಆಟಗಾರ್ತಿ ಎಂದು ಮೂದಲಿಸುವ ಹಾಗೆ ಅಭಿನಂದನೆ ಸಲ್ಲಿಸಿದ್ದರು. ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆಗೆ ಗರಂ ಆದ ಸಾನಿಯಾ, ನಾನು ಸಿಂಗಲ್ಸ್ ವಿಭಾಗದಲ್ಲಿ ಆಡುವುದಿಲ್ಲ. ಸಾಮಾನ್ಯ ಜ್ಞಾನ ಇಟ್ಟುಕೊಂಡು ಮಾತಾಡಿ, ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಅ.19): ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಸತತ 80 ವಾರಗಳ ಕಾಲ ಮಹಿಳಾ ಡಬಲ್ಸ್‌ನ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂತಸವನ್ನು ಸಾನಿಯಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು. ಮಂಜ್ರೇಕರ್ ನಂ.1 ಡಬಲ್ಸ್ ಆಟಗಾರ್ತಿ ಎಂದು ಮೂದಲಿಸುವ ಹಾಗೆ ಅಭಿನಂದನೆ ಸಲ್ಲಿಸಿದ್ದರು. ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆಗೆ ಗರಂ ಆದ ಸಾನಿಯಾ, ನಾನು ಸಿಂಗಲ್ಸ್ ವಿಭಾಗದಲ್ಲಿ ಆಡುವುದಿಲ್ಲ. ಸಾಮಾನ್ಯ ಜ್ಞಾನ ಇಟ್ಟುಕೊಂಡು ಮಾತಾಡಿ, ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮಂಜ್ರೇಕರ್ ಮರು ಟ್ವೀಟ್‌ನಲ್ಲಿ ನೀವು ನನ್ನ ಬಗೆಗಿನ ಮಹತ್ವದ ವಿಷಯವನ್ನು ಯಾರಾದರ ಬಳಿ ಕೇಳಿ ಪಡೆಯಿರಿ. ಯಾರು ಸಾಮಾನ್ಯ ಜ್ಞಾನದ ಕೊರತೆ ಹೊಂದಿರುವವರು ಎಂದು ಕೇಳಿದ್ದಾರೆ.

ಇದಕ್ಕೆ ಸಾನಿಯಾ ಮಹತ್ವದ ವಿಷಯಗಳು ಈ ಲೇಖನದಲ್ಲಿ ಅಡಕವಾಗಿವೆ ನೋಡಿ ಎಂದು ಲಿಂಕ್ ಒಂದನ್ನು ಸೇರಿಸಿದ್ದರು. ಈ ಲೇಖನ ಕೂಡ ನೀವು ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಎಂದು ಹೇಳುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.