ನವದೆಹಲಿ(ಮೇ.19): ವಿರಾಟ್‌ ಕೊಹ್ಲಿಯ ಹೊಸ ಜಾಹೀರಾತೊಂದರ ವಿಡಿಯೋಗೆ ‘ಹಣಕ್ಕಾಗಿ ಜನ ಏನೆಲ್ಲಾ ಮಾಡ್ತಾರೆ’ ಎಂದು ಪ್ರತಿಕ್ರಿಯಿಸಿದ್ದ ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಡ್ಜ್‌ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರಿಗರ ಆಕ್ರೋಶಕ್ಕೆ ಬೆಚ್ಚಿ ಬಿದ್ದ ಹಾಡ್ಜ್ ತಮ್ಮ ಹೇಳಿಕೆಯನ್ನ ಕೊಂಚ ತಿರುಗಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

 

 

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಕೊಹ್ಲಿ!

ಟೀಕೆ ಎದುರಿಸಿದ ಬಳಿಕ ಸ್ಪಷ್ಟನೆ ನೀಡಿರುವ ಹಾಡ್ಜ್‌, ‘ನಾನು ಕೊಹ್ಲಿ ಮಾಡಿದ್ದು ತಪ್ಪು ಎಂದು ಹೇಳಲಿಲ್ಲ. ನಾನು ಸಹ ಇದೇ ರೀತಿ ಮಾಡುತ್ತೇನೆ. ನನ್ನ ಟ್ವೀಟನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದಿದ್ದಾರೆ.