ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೈಬಿಟ್ಟಿರೋದು ಅಭಿಮಾನಿಗಳ ಕಣ್ಣು ಕಂಪಾಗಿಸಿದೆ. ಡೆಲ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಂಬೀರ್‌ಗೆ ಕೊಕ್ ನೀಡಿರುವುದಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ.
ನವದೆಹಲಿ(ನ.17): 2019ರ ಐಪಿಎಲ್ ಟೂರ್ನಿಗೆ ಡೆಲ್ಲಿ ಡೆರ್‌ಡೆವಿಲ್ಸ್ ತಂಡ ಹಿರಿಯ ಆಟಗಾರ ಗೌತಮ್ ಗಂಭೀರ್‌ಗೆ ಕೊಕ್ ನೀಡಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಇದೀಗ ಗಂಭೀರ್ ಕೈಬಿಟ್ಟಿರೋದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಗಂಭೀರ್ ಕೂಡ ಕೈಬಿಟ್ಟಿರೋದು ಪ್ರಶಸ್ತಿ ಕನಸನ್ನ ನುಚ್ಚು ನೂರು ಮಾಡಿದೆ ಎಂದು ಟ್ವಿಟರಿಗರು ಪ್ರತಿಕ್ರಿಯಿಸಿದ್ದಾರೆ.
