ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ 3ನೇ ಪಂದ್ಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ 179 ರನ್‌ಗೆ ಆಲೌಟಾದರೆ, ಆತಿಥೇಯ ಇಂಗ್ಲೆಂಡ್ 67 ರನ್‌ಗೆ ಆಲೌಟ್ ಆಗೋ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಲೀಡ್ಸ್(ಆ.23): ಆಷ್ಯಸ್ ಟೆಸ್ಟ್ ಸರಣಿಯಲ್ಲಿ ಕಳೆದ ಕೆಲದಿನಗಳಿಂದ ಜೋಫ್ರಾ ಆರ್ಚರ್ ಬೌನ್ಸರ್ ಹಾಗೂ ಸ್ಟೀವ್ ಸ್ಮಿತ್ ಇಂಜುರಿ ಮಾತೇ ಕೇಳಿ ಬರುತ್ತಿತ್ತು. ಆದರೆ 3ನೇ ಟೆಸ್ಟ್ ಪಂದ್ಯ ಹಿಂದಿನ ಎಲ್ಲಾ ಘಟನೆಗಳನ್ನು ಮರೆಸಿದೆ. ಆತಿಥೇಯ ಇಂಗ್ಲೆಂಡ್ ತಂಡ ಕೇವಲ 67 ರನ್‌ಗಳಿಗೆ ಆಲೌಟ್ ಆಗೋ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 179 ರನ್ ಸಿಡಿಸಿ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಬೀಗಿದ್ದ ಇಂಗ್ಲೆಂಡ್ ಬ್ಯಾಟಿಂಗ್ ಇಳಿದಾಗ ಅಚ್ಚರಿ ಕಾದಿತ್ತು. ಡೋ ಡೆನ್ಲಿ ಸಿಡಿಸಿದ 12 ರನ್ ಇಂಗ್ಲೆಂಡ್ ಪರ ವೈಯುಕ್ತಿ ಗರಿಷ್ಠ ರನ್. ಇನ್ನೆಲ್ಲರು ಒಂದಂಕಿಗೆ ಔಟಾದರು ಇದರೊಂದಿಗೆ ಇಂಗ್ಲೆಂಡ್ 67 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.