Asianet Suvarna News Asianet Suvarna News

ಇಂಡೋ-ಆಫ್ಘಾನ್ ಪಂದ್ಯ ರೋಚಕ ಟೈ: ಸೆಹ್ವಾಗ್-ಕೈಫ್ ಟ್ವೀಟ್ ಅಂತೂ ಅದ್ಭುತ..!

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನ್ ಮೊಹಮ್ಮದ್ ಶೆಹಜಾದ್ ಅವರ ಆಕರ್ಷಕ ಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ರಾಹುಲ್-ಅಂಬಟಿ ರಾಯುಡು ಜೋಡಿ ಮೊದಲ ವಿಕೆಟ್’ಗೆ 110 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿತು.

Twitter Reactions Afghanistan hold India to a thrilling tie in a nail biting encounter
Author
Bengaluru, First Published Sep 26, 2018, 11:47 AM IST
  • Facebook
  • Twitter
  • Whatsapp

ಬೆಂಗಳೂರು[ಸೆ.26]: ಭಾರತ-ಆಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಕೊನೆಯಾ ಕ್ಷಣದಲ್ಲಿ ಎಡವಿದರೆ, ಆಫ್ಘಾನ್ ಕೂಡಾ ಮತ್ತೊಮ್ಮೆ ಕೊನೆಯ ಓವರ್’ನಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿತು. 

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನ್ ಮೊಹಮ್ಮದ್ ಶೆಹಜಾದ್ ಅವರ ಆಕರ್ಷಕ ಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ರಾಹುಲ್-ಅಂಬಟಿ ರಾಯುಡು ಜೋಡಿ ಮೊದಲ ವಿಕೆಟ್’ಗೆ 110 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿತು. ಆದರೆ ಮಧ್ಯಮ ಕ್ರಮಾಂಕ ನಾಟಕೀಯ ಕುಸಿತ ಕಾಣುವುದರೊಂದಿಗೆ ಸೋಲಿನತ್ತ ಮುಖಮಾಡಿತು. ಕೊನೆಯಲ್ಲಿ ಜಡೇಜಾ ಬ್ಯಾಟಿಂಗ್ ನೆರವಿನಿಂದ ಡ್ರಾ ಸಾಧಿಸಿತಾದರೂ ಟೀಂ ಇಂಡಿಯಾ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ರೋಚಕ ಪಂದ್ಯ ವೀಕ್ಷಿಸಿದ ಸೆಹ್ವಾಗ್-ಕೈಫ್ ಸೇರಿದಂತೆ ಹಲವರು ಏನಂದ್ರ ನೀವೇ ನೋಡಿ...

Follow Us:
Download App:
  • android
  • ios