ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ ಸುಲಭವಾಗಿ ಕೈಚೆಲ್ಲಿದೆ ಟೀಂ ಇಂಡಿಯಾ ವಿರುದ್ಧ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಸೋಲಿಗೆ ಕಾರಣಗಳು ಸೇರಿದಂತೆ ಹಲವು ಅಂಶಗಳನ್ನ ಟ್ವಿಟರಿಗರು ಬೊಟ್ಟು ಮಾಡಿದ್ದಾರೆ.
ಸೌತಾಂಪ್ಟನ್(ಸೆ.02): ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 60 ರನ್‌ಗಳ ಸೋಲು ಅನುಭವಿಸಿರುವ ಟೀಂ ಇಂಡಿಯಾ ಸರಣಿ ಕೈಚೆಲ್ಲಿದೆ. ಈ ಮೂಲಕ ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಹಣೆಬರಹ ಬದಲಾಯಿಸಲು ಕೊಹ್ಲಿ ಸೈನ್ಯಕ್ಕೂ ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ, ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಹಾಗೂ ನಾಯಕತ್ವ ಸೇರಿದಂತೆ ಹಲವು ಅಂಶಗಳೇ ಸೋಲಿಗೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಟ್ವಿಟರಿಗರು ಪ್ರತಿಕ್ರಿಯೆ ಇಲ್ಲಿದೆ.
