ಒಂದು ಹಂತದಲ್ಲಿ ಎರಡು ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ರಾಹುಲ್-ರಹಾನೆ ಅದ್ಭುತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ ಕೇವಲ 118 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇದು ರಾಹುಲ್ ಅವರ ಟೆಸ್ಟ್ ಬದುಕಿನ 5ನೇ ಶತಕವಾಗಿದೆ.

ಓವಲ್[ಸೆ.11]: ಕರ್ನಾಟಕದ ಪ್ರತಿಭೆ ಕೆ.ಎಲ್ ರಾಹುಲ್ ಕೊನೆಗೂ ಶತಕ ಸಿಡಿಸಿ ರನ್ ಬರ ನೀಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ 4 ಟೆಸ್ಟ್’ಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ರಾಹುಲ್ ಮೇಲೆ ಅನೇಕ ಟೀಕಾಕಾರರು ಮುಗಿ ಬಿದ್ದಿದ್ದರು. ಅವರಿಗೆಲ್ಲ ತನ್ನ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ ರಾಹುಲ್.

ಒಂದು ಹಂತದಲ್ಲಿ ಎರಡು ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ರಾಹುಲ್-ರಹಾನೆ ಅದ್ಭುತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ ಕೇವಲ 118 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇದು ರಾಹುಲ್ ಅವರ ಟೆಸ್ಟ್ ಬದುಕಿನ 5ನೇ ಶತಕವಾಗಿದೆ. ಜತೆಗೆ ಇಂಗ್ಲೆಂಡ್ ನೆಲದಲ್ಲಿ ರಾಹುಲ್ ಬಾರಿಸಿದ ಮೊದಲ ಟೆಸ್ಟ್ ಶತಕವಾಗಿದೆ.

ರಾಹುಲ್ ಸೈಲೆಂಟ್ ಸೆಂಚುರಿಯ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…